ರಿಪ್ಪನ್‌ಪೇಟೆ: ಜೈನರ ಪ್ರಸಿದ್ಧ ತೀರ್ಥಕ್ಷೇತ್ರ ಹೊಂಬುಜ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ವಾರ್ಷಿಕ ಮಹಾ ರಥೋತ್ಸವವು ಇಂಪಾಲ, ಗೋಕಾಕ್, ಮಹಾರಾಷ್ಟ್ರಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಇದನ್ನೂ ಓದಿ ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು
ದೇವಸ್ಥಾನದ ಪ್ರಧಾನ ಪುರೋಹಿತರಾದ ಪದ್ಮರಾಜ ಇಂದ್ರ ಹಾಗೂ ಸಹ ಪುರೋಹಿತ ವರ್ಗವು ನಿತ್ಯವಿಧಿ ಸಹಿತ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ, ಪೂಜಾ ವಿಧಿ-ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ನಂತರ ಮಾತೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯು ದೇಗುಲದ ಒಳ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿ ದೇವಸ್ಥಾನದ ಮುಂಭಾಗದಲ್ಲಿ 41 ಅಡಿ ಎತ್ತರದ ಪಂಚವರ್ಣಗಳಿಂದ ಕೂಡಿದ, ಧರ್ಮ ಪತಾಕೆಯ ಬಾವುಟಗಳಿಂದ ಅಲಂಕೃತಗೊಂಡ, ಮಹಾ ರಥದಲ್ಲಿ ಮಧ್ಯಾಹ್ನ 12. 27ರ ಮೂಲ ನಕ್ಷತ್ರದಲ್ಲಿ ಮಾತೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನು ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ವರ್ಯಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಮರದ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.
ಇದನ್ನೂ ಓದಿ ಶಿವಮೊಗ್ಗ, ವಿಧಾತ್ರಿ ಕೆಫೆಯಲ್ಲಿ ಗೃಹ ಬಳಕೆಯ ಸಿಲಿಂಡರ್ ಪತ್ತೆ, ಅಧಿಕಾರಿಗಳಿಂದ ಸೀಜ್
ರಾಜ ಗಾಂಭೀರ್ಯದ ಗಜ ರಾಣಿ ಐಶ್ವರ್ಯ ತನ್ನ ಎರಡು ಮುಂಗಾಲುಗಳನ್ನು ಮೇಲೆತ್ತಿ ದೇವಿಗೆ ಗಿಳಿಟ್ಟು ನಮಸ್ಕರಿಸಿದಳು. ಭಕ್ತರ ಹರ್ಷೋದ್ಘಾರ ಮೊಳಗಿಸಿ ಬಾಳೆಹಣ್ಣು ಮತ್ತು ಹೂವುಗಳನ್ನು ರಥದತ್ತ ಎಸೆದು ಭಕ್ತಿ ಸಮರ್ಪಿಸಿದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














