• About Us
  • Advertise
  • Privacy & Policy
  • Contact Us
Wednesday, May 6, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home Uncategorized

ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಪಿಜಿ ಗ್ರಾಜುಯೇಷನ್ ಡೇ, ಎನ್ಇಎಸ್ ಚಿನ್ನದ ಪದಕ ಪ್ರದಾನ

ಸಿದ್ಧಾಂತಬದ್ಧ ಸಹಾನುಭೂತಿಯ ವೃತ್ತಿಪರರ ಅಗತ್ಯವಿದೆ | ಪರೀಕ್ಷಾಂಗ ಕುಲಸಚಿವ ಡಾ.ಉಜ್ವಲ‌.ಯು.ಜೆ 

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
April 18, 2026
in Uncategorized
ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಪಿಜಿ ಗ್ರಾಜುಯೇಷನ್ ಡೇ, ಎನ್ಇಎಸ್ ಚಿನ್ನದ ಪದಕ ಪ್ರದಾನ

ವಿಟಿಯು ವ್ಯಾಪ್ತಿಯ ಎಂಬಿಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಅವರಿಗೆ ಎನ್ಇಎಸ್ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ ಕೊಡಮಾಡುವ, ಎನ್ಇಎಸ್ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು.

Share on FacebookShare on TwitterShare on WhatsApp

ಶಿವಮೊಗ್ಗ: ಇಂದಿನ ಜಗತ್ತಿಗೆ ಕೇವಲ ಕೌಶಲ್ಯವಂತ ವೃತ್ತಿಪರರು ಮಾತ್ರವಲ್ಲ, ಸಿದ್ಧಾಂತಬದ್ಧ ನಾಯಕರು ಮತ್ತು ಸಹಾನುಭೂತಿಯ ನಾಗರಿಕರ ಅಗತ್ಯವಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಉಜ್ವಲ‌.ಯು.ಜೆ ಹೇಳಿದರು.

ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2023-25 ನೇ ಸಾಲಿನ ಎಂಬಿಎ, ಎಂಸಿಎ, ಎಂಟೆಕ್ ಸ್ನಾತಕೋತ್ತರ ಪದವಿಧರರ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀವು ಪಡೆಯುವ ಪದವಿಯು, ಜೀವನದಲ್ಲಿ ಹೊಸ ಅಧ್ಯಾಯವೆಂಬ ಪ್ರಾರಂಭದ ಮುನ್ಸೂಚನೆ. ಬಿಎಂಡಬ್ಲೂ ಅಥವಾ ಮಾರುತಿ ಓಡಿಸಿದರೂ, ರಸ್ತೆ ಎಂಬುದು ಒಂದೇ ಆಗಿರುತ್ತದೆ. ಟೈಟನ್ ಅಥವಾ ರೋಲೆಕ್ಸ್ ಧರಿಸಿದರೂ,
ಕಾಲ ಎಂಬುದು ಒಂದೇ ರೀತಿಯಲ್ಲಿ ಸಾಗುತ್ತದೆ ಎಂಬ ವಾಸ್ತವತೆಯನ್ನು ಅರಿಯಿರಿ. ನೀವು ಧರಿಸುವ ಲೇಬಲ್‌ಗಳು ಅಥವಾ ಹೊಂದುವ ಹುದ್ದೆಗಳಿಗಿಂತ, ಅನುಸರಿಸುವ ಮೌಲ್ಯಗಳು ಮತ್ತು ಸೌಜನ್ಯತೆ ಬದುಕಿನ ಉನ್ನತಿಗೆ ಮುಖ್ಯ.

ಬದುಕಿನ ಯಶಸ್ಸಿನ ಹಾದಿಯಲ್ಲಿ, ನೈತಿಕತೆಯನ್ನು ದಾರಿದೀಪವನ್ನಾಗಿಸಿಕೊಳ್ಳಿ. ಕುತೂಹಲವನ್ನು ನಿರಂತರ ಕಲಿಕೆಯ ಇಂಧನವಾಗಿಸಿಕೊಳ್ಳಿ. ಅನಿಶ್ಚಿತತೆಯ ಸಮಯದಲ್ಲಿ ಧೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ, ವಿನಯವು ಜೀವನಪೂರ್ಣ ಕಲಿಕೆಯ ನೆನಪಾಗಿ ಉಳಿಯಲಿ ಎಂದು ಹಾರೈಸಿದರು.

ಇದನ್ನೂ ಓದಿ > ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅನುಷ್ಠಾನದೊಂದಿಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ಪರಿವರ್ತನಾತ್ಮಕ ಹಂತವನ್ನು ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಕೌಶಲ್ಯ ಆಧಾರಿತ ಮತ್ತು ಸಮಗ್ರ (Holistic) ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಸಾಮರ್ಥ್ಯಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಹೆಚ್ಚಿಸುವತ್ತ ಕೇಂದ್ರಿಕರಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಬೆಟ್ಟದಷ್ಟು ಜ್ಞಾನಕ್ಕಿಂತ, ಮುಷ್ಟಿಯಷ್ಟು ವಿವೇಕ ಮುಖ್ಯ. ಸಮಾಜಮುಖಿ ಕಾರ್ಯಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಬುದ್ಧಿಯಿರುವವನು ಯುದ್ಧವನ್ನು ಗೆಲ್ಲುತ್ತಾನೆ, ಆದರೆ ಬುದ್ಧಿಯೊಂದಿಗೆ ತಾಳ್ಮೆಯಿರುವವನು ಮನಸ್ಸು ಮತ್ತು ಜಗತ್ತನ್ನು ಗೆಲ್ಲುತ್ತಾನೆ. ಅದೃಷ್ಟ, ಹಣೆಬರಹದ ಹಿಂದೆ ಓಡದೆ, ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ, ಕೌಶಲ್ಯಪೂರ್ಣ, ಸಂಸ್ಕಾಯುತ ನಾಗರೀಕರಾಗಿ ಹೊರಹೊಮ್ಮಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಯಶಸ್ಸು ಅತ್ಯಂತ ಮಹತ್ವದ್ದಾಗಿದ್ದು, ಅದಕ್ಕೆ ಯಾವುದೇ ಒಳದಾರಿಗಳಿಲ್ಲ. ನೈತಿಕ ಮೌಲ್ಯಗಳ ಮಾರ್ಗದಲ್ಲಿ ನಡೆಯಿರಿ. ಏಕೆಂದರೆ ನಮ್ಮನ್ನು ನಿಜವಾಗಿ ರಕ್ಷಿಸುವುದು ನಮ್ಮ ನೈತಿಕತೆ ಮಾತ್ರ. ಆ ಮಾರ್ಗದಿಂದ ಕ್ಷಣಕಾಲ ದೂರವಾದಲ್ಲಿ, ನಮ್ಮ ಸಾಧನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುತ್ತೇವೆ ಎಂದು ಹೇಳಿದರು.

ಎನ್ಇಎಸ್ ಚಿನ್ನದ ಪದಕ ಪ್ರದಾನ

ವಿಟಿಯು ವ್ಯಾಪ್ತಿಯ ಎಂಬಿಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ.ಜೆ. ಸಾಲೇರ ಅವರಿಗೆ ಎನ್ಇಎಸ್ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ ಕೊಡಮಾಡುವ, ಎನ್ಇಎಸ್ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದ ಸಂಜಯ್.ಎಂ.ವಿ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಶ್ರೀಕಾಂತ್, ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ.ಹೇಮಂತ್ ಕುಮಾರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಂಸಿಎ ವಿದ್ಯಾರ್ಥಿನಿ ಅನುಶ್ರೀ ಪ್ರಾರ್ಥಿಸಿ, ಸಹ ಪ್ರಾಧ್ಯಾಪಕ ಡಾ.ವಿಕ್ರಮ್.ವಿ ನಿರೂಪಿಸಿದರು‌.

ಇದನ್ನೂ ಓದಿ >  ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಕರೆಂಟ್ ಇರಲ್ಲ

Tags: kannada newskannada news livelatest newsmalnad newsNES Gold Medal Award CeremonyPG Graduation Day at JNNCE Collegeರಾಷ್ಟ್ರೀಯ ಶಿಕ್ಷಣ ಸಮಿತಿಶಿವಮೊಗ್ಗ
Previous Post

ಶಿವಮೊಗ್ಗ, ಸ್ನೇಹಿತನ ಪಾರ್ಟಿಗೆ ಹೋದ ಯುವಕ ಸಾವು!

Next Post

ಮೃತ ಕೆಎಸ್‌ಆರ್‌ಪಿ ನೌಕರನ ಕುಟುಂಬಕ್ಕೆ 1 ಕೋಟಿ ಪರಿಹಾರ ಚೆಕ್ ವಿತರಣೆ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಮೃತ ಕೆಎಸ್‌ಆರ್‌ಪಿ ನೌಕರನ ಕುಟುಂಬಕ್ಕೆ 1 ಕೋಟಿ ಪರಿಹಾರ ಚೆಕ್ ವಿತರಣೆ

ಮೃತ ಕೆಎಸ್‌ಆರ್‌ಪಿ ನೌಕರನ ಕುಟುಂಬಕ್ಕೆ 1 ಕೋಟಿ ಪರಿಹಾರ ಚೆಕ್ ವಿತರಣೆ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ

May 6, 2026
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026

Copyright © 2026 Yuva Dhwani. Designed by KIPL