ಶಿವಮೊಗ್ಗ: ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಿದ್ದು, ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದ್ದು, ಸಮಾಜದ ಬಾಂಧವರು ಸಂಘದ ಸದಸ್ಯರಾಗಲು ಆಸಕ್ತಿ ಇದ್ದಲ್ಲಿ ಸಂಘದ ಕಚೇರಿಯಲ್ಲಿ ಅರ್ಜಿ ಪಡೆದು, ಜಾತಿ ಪ್ರಮಾಣ ಪತ್ರ. 3 ಪೊಟೋ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಭರ್ತಿ ಮಾಡಿ, ಶುಲ್ಕದೊಂದಿಗೆ ಸಂಘದ ಕಛೇರಿಗೆ ಸಲ್ಲಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಭೋವಿ (ವಡ್ಡರ) ವಿದ್ಯಾವರ್ಧಕ ಸಂಘ ತಿಳಿಸಿದೆ.
ಸಂಘದ ಅಧ್ಯಕ್ಷ ಎಸ್.ರವಿಕು ಮಾರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಂಘವು ತೀರ್ಮಾನಿಸಿದ್ದು, ಸಮಾಜ ಬಾಂಧವರು ತಮ್ಮ ಮಕ್ಕಳ ಅಂಕಪಟ್ಟಿ. ಜಾತಿ ಪ್ರಮಾಣ ಪತ್ರ ಮತ್ತು ಸ್ವ-ವಿವರಗಳನ್ನು ಮೇ 31 ರೊಳಗೆ ಸಂಘದ ಕಚೇರಿಗೆ ಖುದ್ದಾಗಿ ಅಥವಾ ಫೊಸ್ಟ್ ಮೂಲಕ ಸಲ್ಲಿಸಬಹುದು.
ಸಂಘದ ಸದಸ್ಯತ್ವ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಸಂಘದ ಕಚೇರಿ, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ, ಬಾಲರಾಜು ಅರಸ್ ರಸ್ತೆ, ಶಿವಮೊಗ್ಗ ಇಲ್ಲಿಗೆ ನೇರವಾಗಿ ಇಲ್ಲವೇ ಸಂಘದ ಕಾರ್ಯದರ್ಶಿ ವೀರೇಶಪ್ಪ .ಕೆ.ಎನ್. ಮೊ: 9113201271 ಅವರಿಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆದು, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ವಿರೇಶ್ ಕ್ಯಾತಿನಕೊಪ್ಪ, ನಿರ್ದೇಶಕರಾದ ತಿಮ್ಮರಾಜು, ಧೀರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರಿ, ರಮೇಶ್ ನವುಲೆ, ಕೃಷ್ಣಮೂರ್ತಿ, ಲೋಕೇಶ್ ಇದ್ದರು..
ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ವಿರೇಶ್ ಕ್ಯಾತಿನಕೊಪ್ಪ, ನಿರ್ದೇಶಕರಾದ ತಿಮ್ಮರಾಜು, ಧೀರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರಿ, ರಮೇಶ್ ನವುಲೆ, ಕೃಷ್ಣಮೂರ್ತಿ, ಲೋಕೇಶ್ ಇದ್ದರು..














