ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ₹68 ಕೋಟಿ ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಈ ಅನುದಾನ ಮಂಜೂರಾಗಿದ್ದು, ಕ್ಷೇತ್ರದಾದ್ಯಂತ ಒಟ್ಟು 13 ಪ್ರಮುಖ ರಸ್ತೆಗಳ 84.78 ಕಿಲೋ ಮೀಟರ್ ಉದ್ದದ ಮಾರ್ಗಗಳನ್ನು ಮರುಡಾಂಬರೀಕರಣದೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತದೆ. ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಬೈಂದೂರು ತಾಲ್ಲೂಕುಗಳ ಪ್ರಮುಖ ಸಂಪರ್ಕ ರಸ್ತೆಗಳು ಈ ಯೋಜನೆಯಲ್ಲಿ ಸೇರಿವೆ.
ಇದನ್ನೂ ಓದಿ > ಮಹಿಷಿ ಮಠದಲ್ಲಿ ಕಳ್ಳತನ, 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ಯಾವ್ಯಾವ ರಸ್ತೆ? ಎಷ್ಟು ವೆಚ್ಚ?
ಶಿವಮೊಗ್ಗ ತಾಲ್ಲೂಕು:
ರಾಜ್ಯ ಹೆದ್ದಾರಿ-57 (ಕಾಚಿನಕಟ್ಟೆ–ವಿಮಾನ ನಿಲ್ದಾಣ–ಲಕ್ಕಿನಕೊಪ್ಪ), ರಾಜ್ಯ ಹೆದ್ದಾರಿ-254 (ಲಕ್ಕಿನಕೊಪ್ಪ–ಉಂಬ್ಳೆಬೈಲು), ರಾಜ್ಯ ಹೆದ್ದಾರಿ-65 (ಉಂಬ್ಳೆಬೈಲು–ಚೆಕ್ ಪೋಸ್ಟ್) — 13.20 ಕಿ.ಮೀ — ₹20 ಕೋಟಿ
ಭದ್ರಾವತಿ ತಾಲ್ಲೂಕು:
ರಾಜ್ಯ ಹೆದ್ದಾರಿ-250 (ಭದ್ರಾವತಿ–ಸಾಸ್ವೇಹಳ್ಳಿ, ವಯಾ: ಹೊಳೆಹೊನ್ನೂರು, ಸಿದ್ಲಿಪುರ, ಸನ್ಯಾಸಿಕೋಡಮಗ್ಗಿ, ನಾಗಸಮುದ್ರ, ಮಂಗೋಟೆ, ಆನವೇರಿ, ನಿಂಬೆಗೊಂದಿ, ಸೈದರಕಲ್ಲಹಳ್ಳಿ) — 3 ಕಿ.ಮೀ — ₹2 ಕೋಟಿ
ಭದ್ರಾವತಿ ತಾಲ್ಲೂಕು:
ರಾಜ್ಯ ಹೆದ್ದಾರಿ-68 & 57 ನಡುವಿನ ಜಿಲ್ಲಾ ಮುಖ್ಯ ರಸ್ತೆ (ವಯಾ: ಕಡದಕಟ್ಟೆ–ವಿಶ್ವೇಶ್ವರನಗರ–ಸಿರಿಯೂರು–ಹಾಗಲಮನೆ–ಅಮೃತಪುರ) — 8 ಕಿ.ಮೀ — ₹6 ಕೋಟಿ
ಸಾಗರ ತಾಲ್ಲೂಕು:
ರಾಜ್ಯ ಹೆದ್ದಾರಿ-62 (ಶಿರಾಳಕೊಪ್ಪ–ಸಾಗರ) — 9.86 ಕಿ.ಮೀ — ₹6 ಕೋಟಿ
ಇದನ್ನೂ ಓದಿ >ಮಹಿಷಿ ಮಠದಲ್ಲಿ ಕಳ್ಳತನ, 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ಶಿವಮೊಗ್ಗ ಗ್ರಾಮಾಂತರ:
ರಾಜ್ಯ ಹೆದ್ದಾರಿ-26 (ಹಲಗೇರಿ–ಹಾಲ್ಕಲ್) — 4.92 ಕಿ.ಮೀ — ₹4 ಕೋಟಿ
ಬೈಂದೂರು ತಾಲ್ಲೂಕು:
ರಾಜ್ಯ ಹೆದ್ದಾರಿ-52 (ಅನಪಾರು–ಸಿದ್ದಾಪುರ) — 3 ಕಿ.ಮೀ — ₹2 ಕೋಟಿ
ಬೈಂದೂರು ತಾಲ್ಲೂಕು:
ರಾಜ್ಯ ಹೆದ್ದಾರಿ-52 (ತೀರ್ಥಹಳ್ಳಿ–ಕುಂದಾಪುರ ರಸ್ತೆ ಭಾಗ) — 3 ಕಿ.ಮೀ — ₹2 ಕೋಟಿ
ಬೈಂದೂರು ತಾಲ್ಲೂಕು:
ಜಿಲ್ಲಾ ಮುಖ್ಯ ರಸ್ತೆ (ತಲ್ಲೂರು–ಉಪ್ಪಿನಕುದ್ರು) — 4 ಕಿ.ಮೀ — ₹2 ಕೋಟಿ
ತೀರ್ಥಹಳ್ಳಿ ತಾಲ್ಲೂಕು:
ಜಿಲ್ಲಾ ಮುಖ್ಯ ರಸ್ತೆ — 3.80 ಕಿ.ಮೀ — ₹3.50 ಕೋಟಿ
ಹೊಸನಗರ ತಾಲ್ಲೂಕು:
ರಾಜ್ಯ ಹೆದ್ದಾರಿ-01 (ಪಡುಬಿದ್ರೆ–ಚಿಕ್ಕಲಗೋಡು) — 4 ಕಿ.ಮೀ — ₹2.50 ಕೋಟಿ
ಶಿಕಾರಿಪುರ ತಾಲ್ಲೂಕು:
ರಾಜ್ಯ ಹೆದ್ದಾರಿ-148 — 11 ಕಿ.ಮೀ — ₹6 ಕೋಟಿ
ಸೊರಬ ತಾಲ್ಲೂಕು:
ರಾಜ್ಯ ಹೆದ್ದಾರಿ-76, 50, 01, 77 (ಅಂಕರವಳ್ಳಿ–ಮೂಡಿದೊಡ್ಡಿಕೊಪ್ಪ–ಹುರಳಿಕೊಪ್ಪ–ಕೋಟಿಪುರ–ಆನವಟ್ಟಿ–ಹರಳಿಕೊಪ್ಪ–ಕುಪ್ಪಗಡ್ಡೆ–ತವನಂದಿ–ಬಿಳವಗೋಡು–ಕಲ್ಲಂಬಿ–ಗುಡವಿ–ಕಾಂತನಹಳ್ಳಿ–ಗುಂಜನೂರು) — 10 ಕಿ.ಮೀ — ₹6 ಕೋಟಿ
ಇದನ್ನೂ ಓದಿ > ಶಿವಮೊಗ್ಗ, ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಕಾರು!
ಶಿವಮೊಗ್ಗ ನಗರ:
ರಾಜ್ಯ ಹೆದ್ದಾರಿ-254 & 57 (ಬೊಮ್ಮನಕಟ್ಟೆ–ಗೆಜ್ಜೇನಹಳ್ಳಿ) ಅಗಲೀಕರಣ ಹಾಗೂ ಅಭಿವೃದ್ಧಿ — 7 ಕಿ.ಮೀ — ₹6 ಕೋಟಿ
ಈ ಯೋಜನೆ ಜಾರಿಗೆ ಬಂದ ಬಳಿಕ ಸಂಪರ್ಕ ರಸ್ತೆಗಳ ಗುಣಮಟ್ಟ ಸುಧಾರಿಸಿ, ಸಾರ್ವಜನಿಕರಿಗೆ ಉತ್ತಮ ಸಂಚಾರ ಸೌಲಭ್ಯ ಒದಗಲಿದೆ ಎಂದು ಸಂಸದರು ತಿಳಿಸಿದ್ದಾರೆ.














