ಶಿವಮೊಗ್ಗ : ಟ್ರಾಫಿಕ್ ಪೊಲೀಸರ ಬಗ್ಗೆ ಅಪಹಾಸ್ಯ ಮಾಡಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದವರ ವಿರುದ್ಧ ಶಿವಮೊಗ್ಗ ಸಂಚಾರಿ ಪೊಲೀಸ್ ವಿಭಾಗದಿಂದಲೇ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ರೀಲ್ಸ್ ಹಿಟ್? ಆಗುತ್ತಿದೆ.
ಇದನ್ನೂ ಓದಿ >ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಐಜಿಪಿ ಭೇಟಿ
ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ ಸೋಮವಾರ ಬೈಕ್ ಸವಾರ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಾ, ಹಿಂಬದಿ ಸವಾರನ ಜೊತೆಗೆ ಸೇರಿಕೊಂಡು ರೀಲ್ಸ್ ಮಾಡಿದ್ದಾನೆ. ಅಲ್ಲದೆ ಅಲ್ಲೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡಿದ್ದ, ಜತೆಗೆ ಮಹಿಳಾ ದ್ವಿಚಕ್ರ ವಾಹನ ಸವಾರರನ್ನು ಅಪಹಾಸ್ಯ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ.
ಇದನ್ನೂ ಓದಿ >ತೀರ್ಥಹಳ್ಳಿ, ಕೌರಿಹಕ್ಲು ಬಳಿ ರಸ್ತೆಗೆ ನುಗ್ಗಿದ ನೀರು!, ಧರೆಗುರುಳಿದ ವಿದ್ಯುತ್ ಕಂಬಗಳು
ಪೊಲೀಸರು ವಾಹನ ಸವಾರ ಹಾಗೂ ಹಿಂಬದಿ ಸವಾರನನ್ನು ವಶಕ್ಕೆ ಪಡೆದು, ಮೊಪೆಡ್ ಅನ್ನು ಸೀಜ್ ಮಾಡಿದ್ದಾರೆ. ಅಲ್ಲದೆ ಅವರ ಮೂಲಕ ಕ್ಷಮೆ ಕೇಳುವ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ > ಕೊಲ್ಲೂರು ದೇಗುಲದ ಭಕ್ತೆಯ ಚಿನ್ನ ಕಳ್ಳತನ, ಭದ್ರಾವತಿಯ 3 ಮಹಿಳೆಯರ ಬಂಧನ
ಇನ್ನೂ ವಾಹನ ಸವಾರನ ವಿರುದ್ದ ಭಾರತೀಯ ಮೋಟಾರು ವಾಹನಗಳ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗಿದೆ.















