ಶಿವಮೊಗ್ಗ : ನಗರದ ಜಯನಗರ ಪೊಲೀಸ್ ಠಾಣೆಗೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ನಡೆಸಿದರು.
ಇದನ್ನೂ ಓದಿ > ಎಸ್ಐಆರ್ ಕರ್ತವ್ಯ ವೇಳೆ ಬಿಎಲ್ಒ ಮಹಿಳಾ ಅಧಿಕಾರಿ ಸಾವು!
ಠಾಣೆಗೆ ಆಗಮಿಸಿದ ರವಿಕಾಂತೇಗೌಡ ಗೌರವ ವಂದನೆ ಸ್ವೀಕರಿಸಿದರು. ಠಾಣೆಯ ಕಾರ್ಯವೈಖರಿ, ಪ್ರಮುಖ ಕಡತಗಳ ನಿರ್ವಹಣೆ, ಅಪರಾಧ ದಾಖಲಾತಿ ಹಾಗೂ ಇತರೆ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ > ಪದ್ಮ ಪ್ರಶಸ್ತಿ-2027ರ ನಾಮನಿರ್ದೇಶನಕ್ಕೆ ಅರ್ಜಿ ಆಹ್ವಾನ
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, ಡಿವೈಎಸ್ಪಿ ಸಂಜೀವ್ ಕುಮಾರ್, ಜಯನಗರ ಠಾಣೆ ಇನ್ಸ್ಪೆಕ್ಟರ್ ರವಿ ಪಾಟೀಲ್, ಸಿ.ಇ.ಎನ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಎರಡು ಠಾಣೆಗಳ ಸಿಬ್ಬಂದಿ ಇದ್ದರು.















