ಶಿವಮೊಗ್ಗ: ಮಲೆನಾಡಲ್ಲಿ ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆ ಮುಂದುವರೆದಿದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇದನ್ನೂ ಓದಿ >ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಐಜಿಪಿ ಭೇಟಿ
ಸೋಮವಾರ ಬೆಳಿಗ್ಗೆ 4,135 ಕ್ಯೂಸೆಕ್ ಇದ್ದ ಒಳಹರಿವು, ಮಂಗಳವಾರ ಬೆಳಿಗ್ಗೆಯ ವೇಳೆಗೆ 8,117 ಕ್ಯೂಸೆಕ್ಗೆ ತಲುಪಿದ್ದು, ಪರಿಣಾಮವಾಗಿ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ 1 ಅಡಿಯಷ್ಟು ಹೆಚ್ಚಳವಾಗಿದೆ. #Bhadra reservoir,
ಇದನ್ನೂ ಓದಿ > ಪದ್ಮ ಪ್ರಶಸ್ತಿ-2027ರ ನಾಮನಿರ್ದೇಶನಕ್ಕೆ ಅರ್ಜಿ ಆಹ್ವಾನ
ಗರಿಷ್ಠ 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ನೀರಿನ ಮಟ್ಟ 139 ಅಡಿ 6 ಇಂಚು ದಾಖಲಾಗಿತ್ತು. ಒಳಹರಿವು ಗಣನೀಯವಾಗಿ ಹೆಚ್ಚಾಗಿರುವುದರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 140 ಅಡಿ 6 ಇಂಚಿಗೆ ಏರಿಕೆಯಾಗಿದೆ. ಪ್ರಸ್ತುತ ಜಲಾಶಯದಲ್ಲಿ 27.231 ಟಿಎಂಸಿ ನೀರು ಸಂಗ್ರಹವಿದ್ದು, ಹೊರಹರಿವನ್ನು 212 ಕ್ಯೂಸೆಕ್ಗೆ ಸೀಮಿತಗೊಳಿಸಲಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 170 ಅಡಿ 9 ಇಂಚು ಇತ್ತು.
ಇದನ್ನೂ ಓದಿ > ಶಿವಮೊಗ್ಗ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ, ರೆಡ್ ಅಲರ್ಟ್!

image description














