ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಕಳೆದ ಐದು ದಿನಗಳಿಂದ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯೊಂದರ ಮೇಲ್ಚಾವಣಿ ಹಾರಿಹೋಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಇದನ್ನೂ ಓದಿ > ಹೊಳೆಹಟ್ಟಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಭಾರಿ ಅನಾಹುತ!
ಅರಮನೆಕೊಪ್ಪ ಗ್ರಾಮದ ನಿವಾಸಿ ಗಣೇಶ ಉಡುಪ ಎಂಬುವವರಿಗೆ ಸೇರಿದ ವಾಸದ ಮನೆ. ಅನಿರೀಕ್ಷಿತವಾಗಿ ಅಪ್ಪಳಿಸಿದ ಭಾರೀ ರಭಸದ ಗಾಳಿಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಬಂದಿದೆ. ಇದರಿಂದಾಗಿ ಮನೆಯೊಳಗಿದ್ದ ದಿನಬಳಕೆಯ ವಸ್ತುಗಳು ಹಾಗೂ ದವಸ-ಧಾನ್ಯಗಳು ಮಳೆನೀರಿಗೆ ಸಿಲುಕಿ ಹಾನಿಯಾಗಿವೆ.
ಇದನ್ನೂ ಓದಿ > BMW ಕಾರಿನಲ್ಲಿ ಗಾಂಜಾ ಸಾಗಾಟ, ವಿನೋಬನಗರ ಪೊಲೀಸರ ದಾಳಿ, ಗಾಂಜಾ ವಶ
ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.















