ಶಿವಮೊಗ್ಗ: ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ಚಿಕಿತ್ಸೆ ನೀಡಲು ಹಾಗೂ ವನ್ಯಜೀವಿಗಳ ರಕ್ಷಣಾ ಕಾರ್ಯಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ಪಶುವೈದ್ಯರೊಬ್ಬರ ಸೇವೆಯ ಅಗತ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ > BMW ಕಾರಿನಲ್ಲಿ ಗಾಂಜಾ ಸಾಗಾಟ, ವಿನೋಬನಗರ ಪೊಲೀಸರ ದಾಳಿ, ಗಾಂಜಾ ವಶ
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಿಸಿರುವಂತೆ, ಈ ಹುದ್ದೆಯು ತುರ್ತು ಸಂದರ್ಭಗಳಲ್ಲಿ ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಮರಣೋತ್ತರ ಪರೀಕ್ಷೆ ನಡೆಸುವುದು ಹಾಗೂ ಮಾನವ-ವನ್ಯಪ್ರಾಣಿ ಸಂಘರ್ಷದ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ವಿದ್ಯಾರ್ಹತೆ: ಬ್ಯಾಚಲರ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬ್ಯಂಡರಿ (B.V.Sc & A.H) ಪದವಿ ಪಡೆದಿರಬೇಕು. ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ (ಪೋಸ್ಟ್ ಗ್ರಾಜ್ಯುಯೇಷನ್) ಪಡೆದವರಿಗೆ ಹಾಗೂ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ ಅಥವಾ ಮೃಗಾಲಯಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಇದನ್ನೂ ಓದಿ > ಹೊಳೆಹಟ್ಟಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಭಾರಿ ಅನಾಹುತ!
ಆಸಕ್ತರು ತಮ್ಮ ಸ್ವಯಂ ವಿವರಗಳ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 27 ರಂದು ಬೆಳಿಗ್ಗೆ 10 ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ,ವನ್ಯಜೀವಿ ವಿಭಾಗ ಶಿವಮೊಗ್ಗ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ನಮೂನೆಯನ್ನು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಅಥವಾ https://sakrebailuelephantcamp.org/ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ
ಕಚೇರಿ ದೂರವಾಣಿ: 08182-222983,
ವಿಜಯ್‌ಕುಮಾರ್ ಕಾಳಪ್ಪನವರ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 9481461553.
ವಿನಯ್ ಜೆ ಆರ್, ವಲಯ ಅರಣ್ಯಾಧಿಕಾರಿ: 9663121406 ಇವರನ್ನು ಸಂಪರ್ಕಿಸಬಹುದೆಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















