• About Us
  • Advertise
  • Privacy & Policy
  • Contact Us
Friday, September 11, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗ, ಎಚ್.ಎಸ್.ರುದ್ರಪ್ಪ ಪಿಯು ಕಾಲೇಜಿನಲ್ಲಿ ಕಸಾಪ ದತ್ತಿ ಉಪನ್ಯಾಸ  

ಕಾಲಾತೀತ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸಿ  | ಲೇಖಕ ಬಿದರಗೋಡು ನಾಗೇಶ್‌

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
July 13, 2026
in ಶಿವಮೊಗ್ಗ
ಶಿವಮೊಗ್ಗ, ಎಚ್.ಎಸ್.ರುದ್ರಪ್ಪ ಪಿಯು ಕಾಲೇಜಿನಲ್ಲಿ ಕಸಾಪ ದತ್ತಿ ಉಪನ್ಯಾಸ  
Share on FacebookShare on TwitterShare on WhatsApp
ಶಿವಮೊಗ್ಗ:  ಕಾಲಾತೀತ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸಿ, ಪ್ರತಿಯೊಂದು ವಿಚಾರವನ್ನೂ ವಿವೇಕದ ತಕ್ಕಡಿಯಲ್ಲಿ ತೂಗಿ ಪ್ರಶ್ನಿಸುವ ಮನೋಭಾವವೇ ಕುವೆಂಪು ಅವರ ಚಿಂತನೆಯ ಸಾರವಾಗಿದ್ದು, ಅದನ್ನು ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ಲೇಖಕ ಬಿದರಗೋಡು ನಾಗೇಶ್‌ ಹೇಳಿದರು.
ಇದನ್ನೂ ಓದಿ > > ಗೋಪಿ ವೃತ್ತದ ಬಳಿ ರಸ್ತೆ ಮಧ್ಯೆ ಅಡ್ಡಲಾಗಿ ಬಿದ್ದ ಮರ, ಕಾರು ಅಪಾಯದಿಂದ ಪಾರು!
ನಗರದ ಎಚ್.ಎಸ್‌ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಿ. ಡಿ.ಆರ್. ರತ್ನಾಕರ ಸ್ಮಾರಕ ದತ್ತಿ ದಾನಿಗಳಾದ ಅಮರೇಂದ್ರ ಕಿರೀಟಿ ಅವರ ಆಶಯದಂತೆ “ಯುವಜನತೆಗೆ ವೈಚಾರಿಕ ಜಾಗೃತಿಗಾಗಿ ಕುವೆಂಪು ಕರೆ” ವಿಷಯದ ಕುರಿತು ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಕುವೆಂಪು ಅವರು ಯುವಜನತೆಗೆ ನೀಡಿದ ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಕರೆ ಕೇವಲ ಘೋಷವಾಕ್ಯವಲ್ಲ, ಅದು ಸ್ವತಂತ್ರ ಚಿಂತನೆಯ ಬದುಕಿನ ದಿಕ್ಸೂಚಿ. ನಮ್ಮ ಬುದ್ಧಿಗೆ ಕಟ್ಟಿಹಾಕಿರುವ ಮಿತಿಗಳನ್ನು ಮೀರಿ ಯೋಚಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಅವಿವೇಕ ಮತ್ತು ಮೌಢ್ಯಗಳಿಂದ ಆವರಿಸಿರುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕಾದ ಕಾಲ ಇದು.
ಇದನ್ನೂ ಓದಿ > > ಗೃಹಲಕ್ಷ್ಮಿ ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ, ಅಧಿಕೃತ ಆದೇಶ ಬಂದಿಲ್ಲ!
ಧಾರ್ಮಿಕ ಆಚರಣೆಗಳು ಮಾನವನ ಬದುಕಿನಲ್ಲಿ ಸಂಭ್ರಮ ಮತ್ತು ಸಹಬಾಳ್ವೆಯ ಸಂಕೇತವಾಗಬೇಕು. ಕಾಲಾತೀತ ದೃಷ್ಟಿಯಿಂದ ಯೋಚಿಸುವ, ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸುವ ಮನೋವೃತ್ತಿಯೇ ಕುವೆಂಪು ಅವರ ಚಿಂತನೆಯ ಸಾರ ಎಂದು ಹೇಳಿದರು.
ಶ್ರೀ ಆನಂದಪುರ ಜಗದ್ಗುರು ಗುರುಬಸವ ಮಹಾಸ್ವಾಮಿಗಳ ಸ್ಮಾರಕ ದತ್ತಿಯ ಆಶಯದಂತೆ “ಕೆಳದಿ ಸಂಸ್ಥಾನದ ಧರ್ಮ ಸಮನ್ವಯತೆ” ಕುರಿತು ಇತಿಹಾಸ ಸಂಶೋಧಕರಾದ ಡಾ. ಕೆಳದಿ ವೆಂಕಟೇಶ್ ಜೋಯ್ಸ್ ಮಾತನಾಡಿ, 1499 ರಿಂದ 1763ರವರೆಗೆ ಹದಿನೇಳು ರಾಜರು ಹಾಗೂ ಇಬ್ಬರು ರಾಣಿಯರು ಕೆಳದಿ ಸಾಮ್ರಾಜ್ಯವನ್ನು ಸಮರ್ಥವಾಗಿ ಆಳಿದ ಇತಿಹಾಸವನ್ನು ವಿವರಿಸಿದರು.
ಕೆಳದಿ ಶಿವಪ್ಪ ನಾಯಕರು, ಶಿವಮೊಗ್ಗದ ಇತಿಹಾಸದ ಹೆಮ್ಮೆಯ ಪ್ರತೀಕ. ಹಿಂದೂ, ಇಸ್ಲಾಂ, ಕ್ರೈಸ್ತ ಹಾಗೂ ಜೈನ ಧರ್ಮಗಳ ನಡುವೆ ಸಮನ್ವಯತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಿದ ಆಡಳಿತ ಕೆಳದಿ ಅರಸರ ವೈಶಿಷ್ಟ್ಯವಾಗಿತ್ತು. ಮತೀಯ ಪ್ರಚೋದನೆಗೆ ಅವಕಾಶ ನೀಡದೆ ಸರ್ವಧರ್ಮ ಸಮಭಾವವನ್ನು ಉಳಿಸಿಕೊಂಡ ಆಡಳಿತ ಇಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಕೊಣಂದೂರಿನ ರಾಷ್ಟ್ರೀಯ ವಸತಿ ಶಾಲೆಯಲ್ಲಿ ಮಲೆನಾಡ ಹಬ್ಬ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ನೀವು ವಿದ್ಯಾಭ್ಯಾಸ ಮಾಡುತ್ತಿರುವ ಎನ್‌ಇಎಸ್ ಶಿಕ್ಷಣ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಫಲ. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ. ಅದು ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆ. ನಿಮ್ಮ ನಡೆ-ನುಡಿ, ಸಂಸ್ಕಾರ ಮತ್ತು ಜ್ಞಾನ ಸಮಾಜಕ್ಕೆ ಮಾದರಿಯಾಗುವಂತಿರಬೇಕು. ಆಗಲೇ ಶಿಕ್ಷಣಕ್ಕೂ, ಶಿಕ್ಷಣ ಪಡೆದ ಪ್ರಮಾಣಪತ್ರಕ್ಕೂ ನಿಜವಾದ ಗೌರವ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಆರ್. ಆದಿತ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್ ಸ್ವಾಗತಿಸಿ, ಉಪನ್ಯಾಸಕ ರವಿ ವಂದಿಸಿದರು.

Tags: kannada newskannada news liveKasapa Datti Lecture at H.S. Rudrappa PU Collegelatest newsmalnad newsshimogashivamoggaಶಿವಮೊಗ್ಗ
Previous Post

ಗೃಹಲಕ್ಷ್ಮಿ ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ, ಅಧಿಕೃತ ಆದೇಶ ಬಂದಿಲ್ಲ!

Next Post

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ, ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಪುನರಾರಂಭ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಕುಸಿದ ಶರಾವತಿ ಹಿನ್ನೀರು ಮಟ್ಟ, ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ!

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ, ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಪುನರಾರಂಭ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ತೀರ್ಥಹಳ್ಳಿ, ಅಕ್ರಮ ಗೋಸಾಗಾಟ | ವಾಹನ ಮತ್ತು ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!

ತೀರ್ಥಹಳ್ಳಿ, ಅಕ್ರಮ ಗೋಸಾಗಾಟ | ವಾಹನ ಮತ್ತು ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!

September 11, 2026
ಶಿವಮೊಗ್ಗ, ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿ ಎಚ್.ಸಿ. ಯೋಗೇಶ್‌ರಿಗೆ ತವರಿನಲ್ಲಿ ಅಭಿನಂದನೆ

ಶಿವಮೊಗ್ಗ, ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿ ಎಚ್.ಸಿ. ಯೋಗೇಶ್‌ರಿಗೆ ತವರಿನಲ್ಲಿ ಅಭಿನಂದನೆ

September 11, 2026
ಶಿವಮೊಗ್ಗ, ಸೇತುವೆ ಮೇಲಿಂದ ತುಂಗಾ ನದಿಗೆ ಜಿಗಿದ ಯುವತಿ!

ಶಿವಮೊಗ್ಗ, ಸೇತುವೆ ಮೇಲಿಂದ ತುಂಗಾ ನದಿಗೆ ಜಿಗಿದ ಯುವತಿ!

September 11, 2026
ವಾಮಾಚಾರದ ಭಯ ಹುಟ್ಟಿಸಿ ಚಿನ್ನಾಭರಣ ವಂಚನೆ, ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ, ಆಗಿದ್ದೇನು?

ವಾಮಾಚಾರದ ಭಯ ಹುಟ್ಟಿಸಿ ಚಿನ್ನಾಭರಣ ವಂಚನೆ, ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ, ಆಗಿದ್ದೇನು?

September 11, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ತೀರ್ಥಹಳ್ಳಿ, ಅಕ್ರಮ ಗೋಸಾಗಾಟ | ವಾಹನ ಮತ್ತು ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!

ತೀರ್ಥಹಳ್ಳಿ, ಅಕ್ರಮ ಗೋಸಾಗಾಟ | ವಾಹನ ಮತ್ತು ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!

September 11, 2026
ಶಿವಮೊಗ್ಗ, ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿ ಎಚ್.ಸಿ. ಯೋಗೇಶ್‌ರಿಗೆ ತವರಿನಲ್ಲಿ ಅಭಿನಂದನೆ

ಶಿವಮೊಗ್ಗ, ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿ ಎಚ್.ಸಿ. ಯೋಗೇಶ್‌ರಿಗೆ ತವರಿನಲ್ಲಿ ಅಭಿನಂದನೆ

September 11, 2026

Copyright © 2026 Yuva Dhwani. Designed by KIPL