ಸಾಗರ: ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದ್ದು, ಹಿನ್ನೀರಿನ ಪ್ರಮಾಣವೂ ಹೆಚ್ಚಿದ್ದರಿಂದ ಸಮೀಪದ ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಪುನರಾರಂಭಗೊಂಡಿದೆ.
ಜಲಾಶಯದ ಹಿನ್ನೀರು ಕಡಿಮೆಯಾಗಿದ್ದರಿಂದ ಜೂನ್ ಆರಂಭದಲ್ಲಿ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ > > ಸಿಟಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಪೊಲೀಸರು, ಕಟ್ಟುನಿಟ್ಟಿನ ಸೂಚನೆ
ಕಳೆದೊಂದು ವಾರದಿಂದ ಸಾಗರ, ಹೊಸನಗರ ತಾಲ್ಲೂಕು ಸೇರಿ ಮಲೆನಾಡಿನಲ್ಲಿ ಉತ್ತಮ ಮಳೆ ಸುರಿದ ಕಾರಣ ಶರಾವತಿ ಮೈದುಂಬಿದ್ದು, ಲಿಂಗನಮಕ್ಕಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಹಲ್ಕೆ- ಮುಪ್ಪಾನೆ ನಡುವಿನ ಲಾಂಚ್ ಸೇವೆ ಆರಂಭವಾಗಿದೆ ಎಂದು ಲಾಂಚ್ ನಿರೀಕ್ಷಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ














