ಶಿವಮೊಗ್ಗ : ಭದ್ರಾವತಿ ತಾಲೂಕಿನ ಎಳನೀರು ವ್ಯಾಪಾರಿಯೊಬ್ಬರ ಮಗಳನ್ನು 7 ನೇ ತರಗತಿಗೆ ಅಡ್ಮಿಷನ್ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಿನ್ಸಿಪಾಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ, ಎಳನೀರು ವ್ಯಾಪಾರಿ ಮೇಘರಾಜ.ಸಿ ಎಂಬುವವರು ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿರುವ ಸ್ಥಳೀಯ ವಸತಿ ಶಾಲೆಗೆ ತಮ್ಮ ಮಗಳನ್ನು 7ನೇ ತರಗತಿಗೆ ಅಡ್ಮಿಷನ್ ಮಾಡಲು ತೆರಳಿದ್ದರು. ಈ ವೇಳೆ ಶಾಲೆಯ ಪ್ರಿನ್ಸಿಪಾಲ್ ಅವರು ಮಗಳ ಅಡ್ಮಿಷನ್‌ಗಾಗಿ ಡ್ರಮ್ ಸೆಟ್ ಕೊಡುವ ನೆಪದಲ್ಲಿ 20,000 ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ > > ಆಟವಾಡುತ್ತಾ ರಸ್ತೆಗೆ ಬಂದ ಬಾಲಕ, ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ಇದಾದ ನಂತರ, ಜುಲೈ 20, 2026 ರಂದು ಮಧ್ಯಾಹ್ನ 12.20 ಗಂಟೆಯ ಸುಮಾರಿಗೆ ವಸತಿ ಶಾಲೆಯ ತಮ್ಮ ಕೊಠಡಿಯಲ್ಲಿ ಪ್ರಿನ್ಸಿಪಾಲ್ ನಾಮದೇವ್ ಅವರು ದೂರುದಾರರಿಂದ 10,000 ರೂಪಾಯಿ ಮುಂಗಡ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ಪ್ರಿನ್ಸಿಪಾಲ್ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ವಿಶ್ವದಾಖಲೆಯ ನೃತ್ಯ ಪ್ರದರ್ಶನ ಹೇಗಿತ್ತು?
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರುದ್ರೇಶ್ ಕೆ.ಪಿ., ವೀರಬಸಪ್ಪ ಎಲ್. ಕುಸಲಾಪುರ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.














