ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಆದಿಚುಂಚನಗಿರಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮನೆ-ಮನ ಸಾಹಿತ್ಯ ಹುಣ್ಣಿಮೆಯ 252 ನೇ ತಿಂಗಳ ಕಾರ್ಯಕ್ರಮ ಹಾಗೂ ಗುರುಪೂರ್ಣಿಮೆ ಸಂಭ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ > > ಕಾರುಗಳ ನಡುವೆ ಭೀಕರ ಅಪಘಾತ, ಮೂವರಿಗೆ ಗಂಭೀರ ಗಾಯ
ಪ್ರತಿಯೊಂದು ಕಾರ್ಯಕ್ರಮದ ಹಿಂದೆ ಉತ್ತಮ ಚಿಂತನೆ ಹಾಗೂ ಅರ್ಥಪೂರ್ಣ ಸಂಯೋಜನೆ ಇರುವುದೇ ಸಾಹಿತ್ಯಹುಣ್ಣಿಮೆಯ ವಿಶೇಷತೆ. ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಗುರುಪರಂಪರೆಯನ್ನು ಗೌರವಿಸುತ್ತವೆ. ನಮ್ಮ ದೇಶದಲ್ಲಿ ಧರ್ಮ, ಜಾತಿ, ಪಂಗಡಗಳ ವೈವಿಧ್ಯವಿದ್ದರೂ ಎಲ್ಲರೂ ಒಟ್ಟಾಗಿ ಬದುಕುವ ಸಂಸ್ಕೃತಿಯನ್ನು ಧಾರ್ಮಿಕ ನಾಯಕರು ಮತ್ತು ಗುರುಗಳು ಬೆಳೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಂ. ಬಿ. ನಟರಾಜ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಅಭಿನಂನೆ ಸ್ವೀಕರಿಸಿ ಮಾತನಾಡಿದ ಅವರು, ಗುರು-ಶಿಷ್ಯರ ನಡುವಿನ ಗೌರವ ಮತ್ತು ಆತ್ಮೀಯ ಸಂಬಂಧವು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಅದು ಆದಿಕಾಲದಿಂದಲೂ ಮುಂದುವರಿದು ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ > > ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು!
ಗುರುಪೂರ್ಣಿಮೆಯ ಮಹತ್ವ ಕುರಿತು ಯಕ್ಷಗಾನ ಕಲಾವಿದ ದತ್ತಮೂರ್ತಿ ಭಟ್ಟ ಮಾತನಾಡಿ, ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ಗುರುಪರಂಪರೆಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಜೀವನದ ಸಾರ್ಥಕತೆ ಎಂದರು.
ಉದ್ಯಮಿ ಡಾ. ಕಡಿದಾಳು ಗೋಪಾಲ್ ಮಾತನಾಡಿ, 252 ತಿಂಗಳುಗಳ ಕಾಲ ನಿರಂತರವಾಗಿ ಸಾಹಿತ್ಯಹುಣ್ಣಿಮೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಡಿ. ಮಂಜುನಾಥ ಹಾಗೂ ಅವರ ತಂಡದ ಸೇವೆ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಹಾಗೂ ಪ್ರಾಚಾರ್ಯ ಜಿ. ಎಫ್. ಕುಟ್ರಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕವಿಗಳಾದ ಕೆ. ಎನ್. ರಮೇಶ್ ಹಾಗೂ ಡಾ. ನಿವೇದಿತಾ ಹೆಗಡೆ ಕವನ ವಾಚಿಸಿದರು. ಗಾಯಕಿಯರಾದ ನಳಿನಾಕ್ಷಿ ಮತ್ತು ತಂಡ, ಉಮಾ ದಿಲಿಪ್ ಮತ್ತು ತಂಡ, ಡಾ. ನೇತ್ರಾವತಿ ಮತ್ತು ತಂಡ, ಹಾಗೂ ಸುಶೀಲಾ ಷಣ್ಮುಗಂ ಮತ್ತು ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ > > ಜು.31ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ, ಕಾಂಗ್ರೆಸ್ ಕುರಿತು ಬಿ.ವೈ. ವಿಜಯೇಂದ್ರ ಭವಿಷ್ಯ!
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಉಮೇಶ್ ಆರಾಧ್ಯ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಭಾರತಿ ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಷರೀಫ್ ಪ್ರಾರ್ಥನೆ ಹಾಡಿದರು. ಕೆ. ಎಸ್. ಮಂಜಪ್ಪ ಕಾರ್ಯಕ್ರಮ ನಿರೂಪಿಸಿ, ಭೈರಾಪುರ ಶಿವಪ್ಪ ಮೇಷ್ಟ್ರು ವಂದಿಸಿದರು.














