ಶಿವಮೊಗ್ಗ : ಖ್ಯಾತ ಕವಿಗಳು, ಸಾಹಿತಿಗಳು, ವೈಚಾರಿಕ ಚಿಂತಕರಾಗಿದ್ದ ದಿ. ವಸುದೇವ ಭೂಪಾಳಂ ಅವರ ಸ್ಮರಣೆಯ ದತ್ತಿ ಅಂಗವಾಗಿ ಆಗಸ್ಟ್ 9 ರಂದು ಭಾನುವಾರ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕವನಗಳ ಗಾಯನ, ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗ, ಕೃಷಿ ವಿವಿ ಗೇಟ್ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!
ಈಗಾಗಲೇ ಕವನಗಳ ಗಾಯನ, ವಾಚನ ಮಾಡಲು ಆಸಕ್ತಿಯಿರುವ ಮಕ್ಕಳ ವಿಭಾಗ ಮತ್ತು ಹಿರಿಯರ ವಿಭಾಗ ಗಳಿಗೆ ಆಹ್ವಾನ ನೀಡಲಾಗಿತ್ತು. ಆಸಕ್ತರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ.
ಆಗಸ್ಟ್ 9 ರಂದು ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹೆಸರು ನೋಂದಣಿ ಮಾಡಿದವರು ಸೇರಿದಂತೆ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ. ಮಂಜುನಾಥ ವಿನಂತಿ ಮಾಡಿದ್ದಾರೆ.
ದಿ. ವಸುದೇವ ಭೂಪಾಳಂ ಅವರ ದತ್ತಿ ಆಶಯದಂತೆ ಕವನಗಳ ಗಾಯನ, ವಾಚನ ಸ್ಪರ್ಧೆ ನಡೆಯುತ್ತದೆ. ಭದ್ರಾವತಿಯ ಹಿರಿಯ ಸಾಹಿತಿಗಳಾದ ಜಿ. ವಿ. ಸಂಗಮೇಶ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮನಃಶಾಸ್ತ್ರಜ್ಞ ಎಲ್.ಡಿ.ರೆಮಿಡಿಯೇಟರ್ ಖಲಂದರ್ ಬೆಜ್ಜವಳ್ಳಿ ಭಾಗವಹಿಸಲಿದ್ದಾರೆ ಎಂದು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














