ಭದ್ರಾವತಿ: ಮನೆಯಲ್ಲಿ ಭಿನ್ನಾಭಿಪ್ರಾಯ ಹಾಗೂ ಮನಸ್ಸಿನ ಬೇಸರದಿಂದ 37 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿಯ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.
ಇದನ್ನೂ ಓದಿ > > ಶಿವಮೊಗ್ಗ, ಕೃಷಿ ವಿವಿ ಗೇಟ್ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!
ಮೃತರನ್ನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸುಶೀಲ್ ಕುಮಾರ್ (37) ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ಉಂಟಾದ ಮನಸ್ತಾಪದಿಂದಾಗಿ ಪತ್ನಿ ಐದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಮಾನಸಿಕ ಬೇಸರಕ್ಕೊಳಗಾಗಿದ್ದ ಸುಶೀಲ್, ಅತಿಯಾದ ಮದ್ಯದ ಚಟಕ್ಕೆ ಬಿದ್ದಿದ್ದರೆನ್ನಲಾಗಿದೆ.
ಇದನ್ನೂ ಓದಿ > > ಪ್ರವಾಸಿಗರಿಗೆ ಗುಡ್ನ್ಯೂಸ್, ಸದ್ಯದಲ್ಲೇ ಸಕ್ರೆಬೈಲು ಆನೆ ಬಿಡಾರ ಪುನರಾರಂಭ, ಯಾವಾಗ?
ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > > ಸಿಗಂದೂರು ದೇವಿ ದರ್ಶನಕ್ಕೆ ಹೊರಟಿದ್ದವರ ಕಾರು ಚೋರಡಿ ಬ್ರಿಡ್ಜ್ ಬಳಿ ಪಲ್ಟಿ!














