ಶಿವಮೊಗ್ಗ : ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ ಸಕ್ರೆಬೈಲು ಆನೆ ಬಿಡಾರ ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ. ದುಬಾರೆ ಘಟನೆಯ ಬಳಿಕ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಬಿಡಾರವನ್ನು, ಸರ್ಕಾರದ ಎಲ್ಲಾ SOP ನಿಯಮಗಳನ್ನು ಪಾಲಿಸಿ ಶೀಘ್ರವೇ ತೆರೆಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿ > > ಶಿವಮೊಗ್ಗ, ಕೃಷಿ ವಿವಿ ಗೇಟ್ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!
ಆಗಸ್ಟ್ 15ರಿಂದ ಬಿಡಾರ ಆರಂಭವಾಗುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಅಧಿಕಾರಿಗಳ ಸಭೆಯಲ್ಲಿ ಅಂತಿಮ ದಿನಾಂಕ ನಿಗದಿಯಾಗಲಿದೆ. ನಿಯಮಗಳ ಪ್ರಕಾರ, ಈ ಬಾರಿ ಸಾರ್ವಜನಿಕರಿಗೆ ಆನೆಗಳನ್ನು ಮುಟ್ಟಲು ಅವಕಾಶವಿರುವುದಿಲ್ಲ. ದೂರದಲ್ಲೇ ನಿಂತು ವೀಕ್ಷಿಸಬೇಕಾಗಿದೆ.
ಇದನ್ನೂ ಓದಿ > > ಸಿಗಂದೂರು ದೇವಿ ದರ್ಶನಕ್ಕೆ ಹೊರಟಿದ್ದವರ ಕಾರು ಚೋರಡಿ ಬ್ರಿಡ್ಜ್ ಬಳಿ ಪಲ್ಟಿ!
ಮಾನವ-ಆನೆ ಸಂಘರ್ಷ ತಡೆಯಲು ಕೆಂಪು ಮತ್ತು ಹಸಿರು ಮಾರ್ಗಗಳ ವ್ಯವಸ್ಥೆ ಹಾಗೂ ಹೆಚ್ಚುವರಿ CCTV ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. SOP ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ತಕ್ಷಣ ಪ್ರವಾಸಿಗರಿಗೆ ಅಧಿಕೃತವಾಗಿ ಪ್ರವೇಶ ಸಿಗಲಿದೆ.
ಇದನ್ನೂ ಓದಿ > > ಶಿವಮೊಗ್ಗ: ಗುಡ್ಡೇಕಲ್ ನಲ್ಲಿ ಸಂಭ್ರಮದ ಹರೋಹರ ಜಾತ್ರೆ














