• About Us
  • Advertise
  • Privacy & Policy
  • Contact Us
Thursday, September 3, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗ: ಗುಡ್ಡೇಕಲ್ ನಲ್ಲಿ ಸಂಭ್ರಮದ ಹರೋಹರ ಜಾತ್ರೆ

ಮೊದಲನೆಯ ದಿನ ಭರಣಿ ಕಾವಡಿ | ಎರಡನೆಯ ದಿನ ಆಡಿ ಕೃತ್ತಿಕೆ ಆಚರಿಸಲಾಗುತ್ತಿದೆ.

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
August 6, 2026
in ಶಿವಮೊಗ್ಗ, ವಿಶೇಷ
ಶಿವಮೊಗ್ಗ: ಗುಡ್ಡೇಕಲ್ ನಲ್ಲಿ ಸಂಭ್ರಮದ ಹರೋಹರ ಜಾತ್ರೆ
Share on FacebookShare on TwitterShare on WhatsApp

ಶಿವಮೊಗ್ಗ : ಶ್ರಾವಣ ಮಾಸದಲ್ಲಿ ಆಡಿಕೃತಿಕೆ ಅಂಗವಾಗಿ ಹಳದಿ ಉಡುಪು ವಸ್ತ್ರಗಳನ್ನು ತೊಟ್ಟು ಭಕ್ತರು ಹರೋಹರ ಹರೋಹರ ಎಂದು ದೇವರ ನಾಮಸ್ಮರಣೆ ಮಾಡುತ್ತಾ ಗುಂಪು ಗುಂಪಾಗಿ ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದು ಹರಿಕೆ ತೀರಿಸಿದರು.

ಪುರಾಣ ಪ್ರಸಿದ್ಧ ಆಡಿ ಕೃತ್ತಿಕೆ ಜಾತ್ರೆಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಜನರು ಬರುತ್ತಾರೆ. ವಿಜೃಂಭಣೆಯಿಂದ ಜಾತ್ರೆ ನಡೆಸಲಾಗುತ್ತಿದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಆಡಿ ಕೃತ್ತಿಕೆ ಅಂತಲೂ ಆಚರಿಸಲಾಗುತ್ತಿದೆ.

ತಮಿಳು ಸಮುದಾಯದ ಆರಾಧ್ಯ ದೈವ ಹಾಗೂ ನಗರದ ಪ್ರಸಿದ್ಧ ಗುಡ್ಡೆಕಲ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜಾತ್ರೆ ಗುರುವಾರ ಆರಂಭಗೊಂಡಿತು. ಶ್ರಾವಣ ಮಾಸದ ಭರಣಿ ಹಾಗೂ ಕೃತಿಕಾ ನಕ್ಷತ್ರದಲ್ಲಿ ಆಚರಿಸಲ್ಪಡುವ ಹಬ್ಬದ ಅಂಗವಾಗಿ ಭಕ್ತರು ನಸುಕಿನ ಜಾವದಿಂದಲೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಪ್ರಾರ್ಥನೆಗೆ ಹರಕೆ ಹೊತ್ತವರು ಕಾವಡಿ ಹಾಗೂ ಮಂಗಳವಾದ್ಯದೊಂದಿಗೆ ಕುಟುಂಬ ಸಮೇತರಾಗಿ ಬರಿಗಾಲಲ್ಲಿ ನಡೆದು ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಹರಕೆ ಸಲ್ಲಿಸುವರು.

ಕೆನ್ನೆ ನಾಲಿಗೆಯನ್ನು ಛೇದಿಸಿದ ತ್ರಿಶೂಲ ಹೊತ್ತವರು, ನಿಂಬೆಹಣ್ಣನ್ನು ದಾರದಿಂದ ಪೋಣಿಸಿ ಅದನ್ನು ಸೂಜಿ ಮೂಲಕ ಚರ್ಮಕ್ಕೆ ಚುಚ್ಚಿ ಕೊಂಡವರು, ಭುಜದ ಮೇಲೆ ಕಾವಡಿ ಹೊತ್ತು ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹರೋಹರ ಎಂದು ಬಾಲಸುಬ್ರಹ್ಮಣ್ಯನ ನಾಮ ಸ್ಮರಣೆ ಮಾಡುತ್ತಾ ಪಾದಯಾತ್ರೆಯಲ್ಲಿ ಸಾಲು ಸಾಲಾಗಿ ಬಂದರು. ಇದು ನಗರದ ತುಂಗಾ ನದಿ ದಡದಲ್ಲಿರುವ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ಜಾತ್ರೆಯಲ್ಲಿ ಗುರುವಾರ ಕಂಡು ಬಂದ ದೃಶ್ಯಾವಳಿ.
ಭಕ್ತರ ಭಕ್ತಿಯ ಪರಾಕಾಷ್ಟೇ ನೋಡಿದವರಿಗೆ ಮೈ ಜುಮ್ಮೆನಿಸುವಂತಿತ್ತು, ನಿಜವಾಗಲೂ ಇದು ಸಾಧ್ಯವಾ, ಸಣ್ಣ ಮುಳ್ಳು ಚುಚ್ಚಿದರೂ ನೋವಿನಿಂದ ನರಳುವ ಮನುಷ್ಯ ದೇಹದ ಚರ್ಮವನ್ನೇ ಛೇದಿಸಿ ಅದರಲ್ಲಿ ಅತಿ ಭಾರವನ್ನು ಹೇಗೆ ಹೊರುತ್ತಾನೆ, ಹೇಗೆ ಎಳೆಯುತ್ತಾನೆ ಎಂದು ನೋಡುಗರ ಮನಸ್ಸಿನಲ್ಲಿ ಬೆರಗು ಮೂಡಿಸುತ್ತಿತ್ತು.

ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೀಪಾಲಂಕಾರ ಏರ್ಪಡಿಸಲಾಗಿತ್ತು.ಸಂಜೆ ನಂತರವೂ ಬರುತ್ತಿದ್ದ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹರೋಹರದ ಅಂಗವಾಗಿ ಜಿಲ್ಲೆಯ ನಾನಾ ಭಾಗಗಳಿಂದ ತಮಿಳು ಹಾಗೂ ಇತರ ಸಮುದಾಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಾತ್ರೆಯಿಂದ ಸಂಚಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು,ನಗರದ ಕೆಲ ಶಾಲೆಗಳಿಗೆ ರಜೆ ನೀಡಲಾಗಿದೆ. ಹೊಳೆ ಹೊನ್ನೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಬೇರೆ ಕಡೆಯಿಂದ ಪ್ರಯಾಣಿಸುತ್ತಿವೆ. ಹರಕೆ ಹೊತ್ತವರು ಪಾದಯಾತ್ರೆಯಲ್ಲಿ ಬಂದರೆ,ಕೆಲವರು ದ್ವಿಚಕ್ರ ವಾಹನ, ಕಾರು, ಟ್ಯಾಕ್ಟರ್,ಬಸ್ಸುಗಳಲ್ಲಿ ಬಂದರು, ಜಾತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಶುಕ್ರವಾರ ಆಡಿಕೃತ್ತಿಕೆ ಹಿನ್ನೆಲೆಯಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಹಾಗೂ ಹರಕೆ ಸಲ್ಲಿಸಲಿದ್ದಾರೆ.ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನ ಸಮಿತಿಯು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದೆ.

ಕಾವಡಿ ವಿಶೇಷ

ಒಂದು ಬಿದಿರಿನ ಕೋಲು ಹಾಗೂ ಎರಡು ಬಿದಿರಿನ ಬುಟ್ಟಿಯೇ ಕಾವಡಿ. ಒಂದು ಬುಟ್ಟಿಗೆ ಅರಿಸಿಣ ಬಟ್ಟೆಯನ್ನು ಸುತ್ತಿರುತ್ತಾರೆ. ಅದರಲ್ಲಿ ದೇವರ ಪೂಜೆಯ ಸಾಮಾನನ್ನು ಇಟ್ಟಿರುತ್ತಾರೆ. ಇನ್ನೊಂದು ಬುಟ್ಟಿಯಲ್ಲಿ ಸುಬ್ರಹ್ಮಣ್ಯನಿಗೆ ನೈವೇದ್ಯ ಮಾಡಲು ತಯಾರಿಸಿದ ಪ್ರಸಾದ ಇಟ್ಟಿರುತ್ತಾರೆ. ಬಿದಿರ ಕೋಲಿನ ಕೊನೆಯಲ್ಲಿ ಈ ಎರಡನ್ನು ಅರಸಿಣ ಹಗ್ಗದಲ್ಲಿ ಕಟ್ಟಿ ತಕ್ಕಡಿ ರೀತಿ ನೇತು ಹಾಕಿರುತ್ತಾರೆ. ಇದಕ್ಕೆ ಹಳದಿ ಹೂವಿನಿಂದ ಅಲಂಕಾರ ಮಾಡಿರುತ್ತಾರೆ. ಸುಬ್ರಹ್ಮಣ್ಯನ ಹರಕೆ ಹೊತ್ತವರು ಈ ಹಬ್ಬದ ದಿನ ಆ ಕಾವಡಿಯನ್ನು ಹೊತ್ತು ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗುತ್ತಾರೆ. ಈ ಕಾವಡಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿರುತ್ತಾರೆ. ಹೂವುಗಳಿಂದ ಅಲಂಕರಿಸಿದ ಕಾವಡಿ,ಆಡಿಕೃತ್ತಿಕೆ ಜಾತ್ರೆಯಲ್ಲಿ ಕಾವಡಿ ಹೊತ್ತು ಬರುವ ಭಕ್ತರು ಜನಾಕರ್ಷಣೆಗೆ ಒಳಗಾಗಿದ್ದರು, ಜಾತ್ರೆಯ ಲಕ್ಷಾಂತರ ಜನ ಸೇರಿದರೆ,ಅವರಲ್ಲಿ ನವಿಲು ಕಾವಡಿ,ಅರಮನೆ ಕಾವಡಿ, ಎಳೆ ನೀರು ಕಾವಡಿ, ಜೇನುತುಪ್ಪ ಕಾವಡಿ, ಹಾಲು ಕಾವಡಿ, ಮತ್ತು ಪುಷ್ಪ ಕಾವಡಿ ಹೊತ್ತು ಬರುವವರೆ ಸಾವಿರಾರು ಮಂದಿ ಇದ್ದರು. ಇನ್ನು ಕೆಲವರು ಶ್ರೀ ಬಾಲಸುಬ್ರಮಣ್ಯ ದೇವರನ್ನು ಹೊತ್ತು ಸಣ್ಣತೇರನ್ನು ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡವರು, ನಿಂಬೆ ಹಣ್ಣನ್ನು ಸೂಜಿಯಿಂದ ಚರ್ಮಕ್ಕೆ ಪೋಣಿಸಿಕೊಂಡವರು ಇದ್ದರು. ಕಾವಡಿ ಹೊತ್ತು ಹರಕೆ ತೀರಿಸಿದವರಲ್ಲಿ ಚಿಕ್ಕ ಮಕ್ಕಳಿಂದ ವಯೋ ವೃದ್ಧರು ಇದ್ದರು.

ಹರಕೆಯ ಆಚರಣೆ

ಶ್ರಾವಣ ಮಾಸದಲ್ಲಿ ಒಂದು ತಿಂಗಳು ಈ ವ್ರತವನ್ನು ಆಚರಿಸಿ ಕಾವಡಿ ಹಬ್ಬದ (ಕೃತ್ತಿಕಾ ನಕ್ಷತ್ರದ) ದಿನ ಮಹಿಳೆಯರು ಅರಿಸಿಣ ಸೀರೆ ಧರಿಸಿ, ಪುರುಷರು ಅರಿಶಿಣ ಬಣ್ಣದ ಪಂಚೆಯನ್ನು ಧರಿಸಿ ಮಡಿಯಿಂದ ಆ ಕಾವಡಿಯನ್ನು ಹೆಗಲ ಮೇಲೆ ಹೊತ್ತು ವಿಶೇಷ ವಾದ್ಯಗಳೊಂದಿಗೆ ಮನೆಯಿಂದ ಹೊರಡುತ್ತಾರೆ. ಹೋಗುವಾಗ ಕುಣಿಯುತ್ತಾ ‘ಹರೋ ಹರ… ಹರೋ ಹರ…’ ಎಂದು ಸುಬ್ರಹ್ಮಣ್ಯನನ್ನು ನೆನೆಯುತ್ತಾ ಸಾಗುತ್ತಾರೆ. ಒಂದು ಸಲ ಕಾವಡಿ ಹೊತ್ತುಕೊಂಡರೆ ಅದನ್ನು ಸುಬ್ರಹ್ಮಣ್ಯ ದೇವಾಲಯದ ತನಕ ಹೊತ್ತು ಕೊಂಡಿರಬೇಕು. ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹರಕೆಯನ್ನು ತೀರಿಸಿದ ನಂತರ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಿ ವ್ರತವನ್ನು ಪೂರ್ತಿಗೊಳಿಸಲಾಗುತ್ತದೆ.

ವಿಶೇಷ ವರದಿ : ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

Tags: A festive Harohara fair at Guddekalkannada newskannada news livelatest newsmalnad newsshimogashivamoggaಗುಡ್ಡೇಕಲ್ಶಿವಮೊಗ್ಗ
Previous Post

ಕಸ್ತೂರಬಾ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿ ವೇದಿಕೆಗಳ ಉದ್ಘಾಟನೆ, ವಿವಿಧತೆಯ ಸ್ವಾಗತ ಕೋರಿದ ವಿದ್ಯಾರ್ಥಿನಿಯರು

Next Post

ಶಿವಮೊಗ್ಗ, ಕೃಷಿ ವಿವಿ ಗೇಟ್‌ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ, ಕೃಷಿ ವಿವಿ ಗೇಟ್‌ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!

ಶಿವಮೊಗ್ಗ, ಕೃಷಿ ವಿವಿ ಗೇಟ್‌ ಬಂದ್ ಮಾಡಿ ವಿದ್ಯಾರ್ಥಿಗಳ ಆಕ್ರೋಶ!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026
ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

September 2, 2026
ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

September 2, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026

Copyright © 2026 Yuva Dhwani. Designed by KIPL