ಹೊಳೆಹೊನ್ನೂರು: ವಾಲ್ ಪುಟ್ಟಿ (ಲಪ್ಪಾ) ಉಜ್ಜುವ ಮಿಷನ್ನಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪೈಂಟರ್ ಓರ್ವರು ಸ್ಥಳದಲ್ಲೇ ಸಾವುಕಂಡಿರುವ ಘಟನೆ ಆ.18ರ ಮಂಗಳವಾರ ಸಂಭವಿಸಿದೆ.
ಯಡೇಹಳ್ಳಿ ನಿವಾಸಿ ಶಾರುಖ್ ಖಾನ್ (26) ಮೃತ ವ್ಯಕ್ತಿ.
ಇದನ್ನೂ ಓದಿ > > ನೇಣು ಬಿಗಿದುಕೊಂಡು ಸಿಎ ವಿದ್ಯಾರ್ಥಿ ಆತ್ಮಹತ್ಯೆ, ಕಾರಣವೇನು?
ಹೊಸದಾಗಿ ಖರೀದಿಸಿ ತಂದಿದ್ದ ವಾಲ್ಕೇರ್ ಪುಟ್ಟಿ ಉಜ್ಜುವ ಮಿಷನ್ ಅನ್ನು ಮಂಗಳವಾರ ತಮ್ಮ ಮನೆಯಲ್ಲಿ ಟ್ರಯಲ್ ನೋಡಲು ಚಾಲನೆ ಮಾಡಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದೆ.
ವಿದ್ಯುತ್ ಸ್ಪರ್ಶದಿಂದ ತೀವ್ರ ಅಸ್ವಸ್ಥಗೊಂಡ ಶಾರುಖ್ ಖಾನ್ ಅವರನ್ನು ತಕ್ಷಣವೇ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗ, ಈದ್ ಮಿಲಾದ್ ಹಬ್ಬದ ವೇಳೆ ಇವುಗಳಿಗೆ ಸಂಪೂರ್ಣ ನಿಷೇಧ!
ಯಡೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೈಂಟಿಂಗ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯುವಕನ ಅಕಾಲಿಕ ಸಾವು ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ತೀವ್ರ ಆಘಾತ ತಂದಿದೆ.
ಇದನ್ನೂ ಓದಿ > > ಮಕ್ಕಳಿಗೆ ಬೈಕ್ ಕೊಡ್ತೀರಾ? ಮಾಲೀಕನಿಗೆ ಕೋರ್ಟ್ ವಿಧಿಸಿದ ದಂಡವೆಷ್ಟು ಗೊತ್ತಾ?














