ಶಿವಮೊಗ್ಗ : ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಕ್ರಿವ್ ತಂಡದಿಂದ ಬಿಡುಗಡೆಗೆ ತಯಾರಾಗಿರುವ ಕೋಟೆ ಮಾರಿಕಾಂಬ ಜಾತ್ರೆಯ ವಿಶೇಷ ಹಾಡಿನ ಟ್ರೇಲರ್ ಬಿಡುಗಡೆ ಮಾಡಿ ಸಾಂಗ್ ಕೇಳಿದ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಜೋಗಿ ಪ್ರೇಮ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹೇ ಮಗ ಇದು ಶಿವಮೊಗ್ಗ ಹಾಡಿನ ತಡದಿಂದ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಅಮ್ಮನವರ ಜಾತ್ರೆಯ ಪ್ರಯುಕ್ತ ಜಾತ್ರಾ ಇತಿಹಾಸವುಳ್ಳ ವಿಶೇಷ ಮಾಸ್ ಹಾಡು ತಯಾರಾಗಿದ್ದು, ಇದರ ಸಂಪೂರ್ಣ ಹಾಡು ಫೆ.17ರ ಮಂಗಳವಾರ ಸಂಜೆ ಬಿಡುಗಡೆಯಾಗಲಿದೆ ಎಂದು ಸ್ಟೈಲ್ ಡ್ಯಾನ್ಸ್ ಕ್ರಿವ್ ತಂಡದ ಶಶಿಕುಮಾರ್ ಎನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಾಡಿಗೆ ಸಂಗೀತ ಪ್ರೀನ್ಸ್ ಜೋಸೆಫ್ , ಸಾಹಿತ್ಯ ಗಾಯನ ಶಶಿಕುಮಾರ್ ಎನ್ , ಛಾಯಾಗ್ರಹಣ ಡ್ರೊನ್ ಗಣೇಶ್ , ಸಂಕಲನ ಪಿಕ್ಚರ್ ಪೋಯೆಟ್ ಸುನಿಲ್, ನಿರ್ಮಾಣದ ಕೆಲಸವನ್ನ ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಸಂಸ್ಥೆ ಸ್ಟೈಲ್ ಡಾನ್ಸ್ ಕ್ರಿವ್ ನಿರ್ವಹಿಸಿದೆ. ಈ ಹಾಡನ್ನು ಸ್ಟೈಲ್ ಡಾನ್ಸ್ ಕ್ರಿವ್ ಯೂಟ್ಯೂಬಿನಲ್ಲಿ ಸಾರ್ವಜನಿಕರು ವಿಕ್ಷಿಸಬಹುದಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













