ತೀರ್ಥಹಳ್ಳಿ : ಹೆಗ್ಗೋಡು ಬಳಿ ಕಾಡುಕೋಣದ ಹಿಂಡು ಏಕಾಏಕಿ ರಸ್ತೆ ಮೇಲೆ ಬಂದಿದ್ದು, ಈ ವೇಳೆ ರಸ್ತೆಯಲ್ಲಿ ಕಾರೊಂದು ಅಡ್ಡ ಬಂದ ಪರಿಣಾಮ ಕಾರಿನ ಮೇಲೆ ಕಾಡುಕೋಣ ಹಾರಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.
ಇಂದಿ ಸಂಜೆ ಹರಿಹರಪುರದಿಂದ ಕಮ್ಮರಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕಾರಿಗೆ ಅಡ್ಡ ಬಂದ ಕಾಡುಕೋಣದ ಹಿಂಡಿನಲ್ಲಿ ಒಂದು ಕಾಡುಕೋಣ ಕಾರಿನ ಮೇಲೆ ಹಾರಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ.














