ತೀರ್ಥಹಳ್ಳಿ: ಮೇಗರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಣ್ಣುವಳ್ಳಿ ಗ್ರಾಮದ ಫಾರಂ ಹೌಸ್ ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಆಗುಂಬೆ ಪೊಲೀಸರು 1 ಲಕ್ಷ ರೂ.ಗೂ ಹೆಚ್ಚಿನ ವಸ್ತುಗಳ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗದಿಂದ ವಿಮಾನ ಹಾರಾಟ ಸ್ಥಗಿತ | ಸಂಸದ ರಾಘವೇಂದ್ರ ಮೊದಲ ರಿಯಾಕ್ಷನ್
ಬಾಲರಾಜ್ ಹಾಗೂ ಹರ್ಷ ಬಂಧಿತರು. ಬಂಧಿತರಿಂದ 1,71,000 ರೂ ಮೌಲ್ಯದ 7 ಮೊಬೈಲ್ ಫೋನ್ ಮತ್ತು 1 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ > ಶಿವಮೊಗ್ಗ | ಹೊಸಮನೆಯಲ್ಲಿ ಕ್ರೇನ್’ಗೆ ಸಿಲುಕಿ ಕಾರ್ಮಿಕ ಸಾವು
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














