• About Us
  • Advertise
  • Privacy & Policy
  • Contact Us
Thursday, September 3, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಆಟೋ ಚಾಲಕರ ಪ್ರತಿಭಟನೆ, ಇಷ್ಟು ಡಾಕ್ಯುಮೆಂಟ್ಸ್ ಇಲ್ಲ ಅಂದ್ರೆ ಆಟೋ ಸೀಜ್!, ದೇವರಾಜ್ ಖಡಕ್ ವಾರ್ನಿಂಗ್

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
August 13, 2026
in ಶಿವಮೊಗ್ಗ
ಆಟೋ ಚಾಲಕರ ಪ್ರತಿಭಟನೆ, ಇಷ್ಟು ಡಾಕ್ಯುಮೆಂಟ್ಸ್ ಇಲ್ಲ ಅಂದ್ರೆ ಆಟೋ ಸೀಜ್!, ದೇವರಾಜ್ ಖಡಕ್ ವಾರ್ನಿಂಗ್
Share on FacebookShare on TwitterShare on WhatsApp

ಶಿವಮೊಗ್ಗ: ನಾಳೆಯಿಂದ ನಗರದಲ್ಲಿ ಆಟೋಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ನಿಗದಿತ ದಾಖಲೆಗಳು ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ಸೀಜ್ ಮಾಡಿ ತಗೊಂಡು ಹೋಗುತ್ತೇವೆ ಎಂದು ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ರೈಲ್ವೆ ನಿಲ್ದಾಣದ ಬಳಿಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಸಿಟಿ ಬಸ್ಸನ್ನು ತಡೆದು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಆಟೋ ಚಾಲಕರ ಮನವಿಯನ್ನು ಆಲಿಸಿದ ಅವರು ಇದೇ ವೇಳೆಯಲ್ಲಿ ಆಟೋ ಚಾಲಕರಿಗೂ ಸಹ ಕೆಲವೊಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ > > ಸಾರಿಗೆ ಸಚಿವ ಭೈರತಿ ಸುರೇಶ್‌ಗೆ ಚೇತನ್ ಕೆ. ಗೌಡ ಮನವಿ, ಮನವಿಯಲ್ಲೇನಿದೆ?

ನಾಳೆಯಿಂದ ಪರಿಶೀಲನೆ

ಸಿಟಿ ಬಸ್’ಗಳ ವಿಚಾರಲ್ಲಿ ನಿಮ್ಮಗಳ ಬೇಡಿಕೆಯನ್ನು ಆಲಿಸಿದಂತೆಯೇ ನಿಮಗೂ ಸಹ ನಮ್ಮ ನಿಬಂಧನೆಗಳಿವೆ. ನಾಳೆಯಿಂದ ನಗರದಲ್ಲಿ ಆಟೋಗಳನ್ನು ಪರಿಶೀಲನೆ ನಡೆಸುತ್ತೇವೆ. ಎಲ್ಲ ದಾಖಲೆಗಳೂ ಸಹ ಸರಿಯಾಗಿರಬೇಕು. ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಟೋ ಚಾಲಕರಿಗೆ ಏನೆಲ್ಲಾ ಎಚ್ಚರಿಕೆ?

ಬಹಳಷ್ಟು ಆಟೋಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಎಂಬ ದೂರು ಬಂದಿದೆ. ಹೀಗಾಗಿ, ನಾಳೆಯಿಂದ ನಡೆಯುವ ಪರಿಶೀಲನೆ ವೇಳೆ ಫಿಟ್ನೆಸ್ ಸರ್ಟಿಫಿಕೇಟ್, ಇನ್ಷೂರೆನ್ಸ್ ಸೇರಿದಂತೆ ಎಲ್ಲ ದಾಖಲೆಗಳೂ ಸರಿಯಾಗಿರಬೇಕು. ಇಲ್ಲದೇ ಹೋದಲ್ಲಿ ಅಂತಹ ಆಟೋವನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಪ್ರಮುಖವಾಗಿ, ಬಹಳಷ್ಟು ಆಟೋಗಳಿಗೆ SMG  ನಂಬರ್ ಇಲ್ಲ. ಅಂದಾಜು 7,000 ಆಟೋಗಳಲ್ಲಿ 5,000 ಆಟೋಗಳು ಮಾತ್ರ SMG ನಂಬರ್ ಹಾಕಿವೆ. ಉಳಿದ ಪ್ರತಿಯೊಬ್ಬರೂ ಇದನ್ನು ಪಡೆದು ಹಾಕಬೇಕು. ಇದರೊಟ್ಟಿಗೆ ಆಟೋದಲ್ಲಿ ಡಿಸ್ಪ್ಲೇ ಬೋರ್ಡ್ ಕಡ್ಡಾಯವಾಗಿ ಹಾಕಬೇಕು. ಇಲ್ಲದಿದ್ದರೆ ಯಾವುದೇ ಮುಲಾಜಿಲ್ಲದೇ ಆಟೋ ತಗೊಂಡು ಹೋಗುತ್ತೇವೆ ಎಂದು ಚಾಲಕರಿಗೆ ಹಾಗೂ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಆಟೋ ಚಾಲಕರ ಪ್ರತಿಭಟನೆ

ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಬಸ್‌ನ್ನು ತಡೆದು ರೈಲ್ವೆ ಆಟೋ ನಿಲ್ದಾಣದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ > > ಶಿವಮೊಗ್ಗ, 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!, ಏನಿದು ಪ್ರಕರಣ?

ರೈಲ್ವೆ ನಿಲ್ದಾಣದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬಸ್ ನಿಲ್ಲಿಸಬೇಕು ಎಂದು ಸೂಚಿಸಲಾಗಿದ್ದರೂ ಸಹ ಬಸ್‌ನ್ನು ಆಟೋ ನಿಲ್ದಾಣದವರೆಗೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲಾಗುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು.

ಒಂದು ವಾರದ ಹಿಂದೆ ಆರ್‌ಟಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಿಟಿ ಬಸ್ ಹಾಗೂ ಆಟೋ ಚಾಲಕರ ನಡುವಿನ ಸಮಸ್ಯೆ ಕುರಿತು ಕ್ರಮ ಕೈಗೊಂಡಿದ್ದರು. ಈ ವೇಳೆ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಕ್ರಮಕ್ಕೆ ವಿಡಿಯೋ ಹಾಗೂ ಫೋಟೋ ಸಾಕ್ಷ್ಯಗಳಿವೆ. ಸಿಟಿ ಬಸ್‌ಗಳನ್ನು ಸಿಟಿ ಬಸ್ ನಿಲ್ದಾಣದ ಸಮೀಪವೇ ನಿಲ್ಲಿಸಬೇಕು. ಆಟೋ ನಿಲ್ದಾಣದ ಬಳಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಅಲ್ಲಾ ಭಕ್ಷಿ ತಿಳಿಸಿದರು.

ಇದನ್ನೂ ಓದಿ > > ಸಾರಿಗೆ ಸಚಿವ ಭೈರತಿ ಸುರೇಶ್‌ಗೆ ಚೇತನ್ ಕೆ. ಗೌಡ ಮನವಿ, ಮನವಿಯಲ್ಲೇನಿದೆ?

ಪ್ರತಿಭಟನೆಯ ಸಂದರ್ಭದಲ್ಲಿ ಆಟೋ ಚಾಲಕರು ಬಸ್ ನಿಲುಗಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

Tags: Auto drivers protest near railway stationkannada newskannada news livelatest newsmalnad newsrailway stationshimogashivamoggaTraffic Circle Inspector Devarajಶಿವಮೊಗ್ಗ
Previous Post

ಸಾರಿಗೆ ಸಚಿವ ಭೈರತಿ ಸುರೇಶ್‌ಗೆ ಚೇತನ್ ಕೆ. ಗೌಡ ಮನವಿ, ಮನವಿಯಲ್ಲೇನಿದೆ?

Next Post

ರಿಪ್ಪನ್‌ಪೇಟೆ, ಅರಸಾಳು ಬಳಿ ಹಳ್ಳಕ್ಕೆ ಉರುಳಿದ ಕೋಕ್ ತುಂಬಿದ ಲಾರಿ!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ರಿಪ್ಪನ್‌ಪೇಟೆ, ಅರಸಾಳು ಬಳಿ ಹಳ್ಳಕ್ಕೆ ಉರುಳಿದ ಕೋಕ್ ತುಂಬಿದ ಲಾರಿ!

ರಿಪ್ಪನ್‌ಪೇಟೆ, ಅರಸಾಳು ಬಳಿ ಹಳ್ಳಕ್ಕೆ ಉರುಳಿದ ಕೋಕ್ ತುಂಬಿದ ಲಾರಿ!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026
ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

September 2, 2026
ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

September 2, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026

Copyright © 2026 Yuva Dhwani. Designed by KIPL