ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಜೋರಾಗಿದ್ದು, ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿರುವ ಪ್ರಸಿದ್ಧ ’ಬಾಳೆಬರೆ ಫಾಲ್ಸ್’ ಮೈದುಂಬಿ ಹರಿಯುತ್ತಿದೆ. ಸುಮಾರು 100 ಅಡಿ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತದ ದೃಶ್ಯ ಪ್ರವಾಸಿಗರ ಮನಸೆಳೆಯುತ್ತಿದೆ.
ಇದನ್ನೂ ಓದಿ > >ಮಲೆನಾಡಲ್ಲಿ ಮಳೆ ಅಬ್ಬರ, ಕೋಡಿ ಬಿದ್ದ ಅಂಜನಾಪುರ ಜಲಾಶಯ!
ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಹುಲಿಕಲ್ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯ ಅನಾವರಣಗೊಂಡಿದೆ. ಭೋರ್ಗರೆಯುತ್ತಿರುವ ಈ ನೈಸರ್ಗಿಕ ಜಲಪಾತವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹಾಗೂ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ > > ಹೊಳೆಹೊನ್ನೂರು, ಜನರ ನಿದ್ದೆಗೆಡಿಸಿದ್ದ ಕೋತಿ (ಮುಷ್ಯ) ಸೆರೆ
ಮಳೆಯಿಂದಾಗಿ ಮಲೆನಾಡಿನ ಹಲವು ನೈಸರ್ಗಿಕ ಜಲಪಾತಗಳು ಜೀವಕಳೆ ಪಡೆದುಕೊಂಡಿದ್ದು, ಹುಲಿಕಲ್ ಘಾಟಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಬಾಳೆಬರೆ ಫಾಲ್ಸ್ ಕಣ್ಣಿಗೆ ಹಬ್ಬದಂತೆ ಕಂಗೊಳಿಸುತ್ತಾ ಕೈಬೀಸಿ ಕರೆಯುತ್ತಿದೆ.














