ಶಿವಮೊಗ್ಗ: ಶಿವಮೊಗ್ಗದಲ್ಲಿ ಸುರಿದ ಭಾರೀ ಮಳೆ ಹಲವೆಡೆ ಅನಾಹುತ ಸೃಷ್ಟಿಸಿದೆ. ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದಲ್ಲಿ ಸಿಡಿಲು ಬಡಿದು ಸುಮಾರು 50 ಕುರಿಗಳು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಇದನ್ನೂ ಓದಿ > ಶಿವಮೊಗ್ಗ, ಮಳೆಗಾಳಿಗೆ ಉರುಳಿದ ಮರ, ಗಂಟೆಗಟ್ಟಲೇ ರೈಲು ಸಂಚಾರದಲ್ಲಿ ವ್ಯತ್ಯಯ!
ಇದನ್ನೂ ಓದಿ > ಮೇ.20ರಂದು ಶಿವಮೊಗ್ಗ ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಎಲ್ಲೇಲ್ಲಿ?
ಹಿರಿಯೂರು- ಮಾರಿಕಣಿವೆ ಮೂಲದ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಸಿರಿಯೂರು ಗ್ರಾಮದ ರವಿಕುಮಾರ್ ತೋಟದಲ್ಲಿ ಬೀಡುಬಿಟ್ಟಿದ್ದರು. ಕುರಿಗಾಯಿ ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗದಲ್ಲಿ ಕುರಿ ಮೇಯಿಸುತ್ತಿದ್ದರು. ಕಳೆದ 14 ದಿನದಿಂದ ಸಿರಿಯೂರು ಸುತ್ತಮುತ್ತ ಕುರಿ ಮೇಯಿಸುತ್ತಿದ್ದರು.
ತಡರಾತ್ರಿ ತೋಟದಲ್ಲಿದ್ದ ವೇಳೆ ಸಿಡಿಲು ಬಡಿದು 400 ಕುರಿಗಳ ಪೈಕಿ ಸುಮಾರು 50 ಕುರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















