ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಇಂದು ಸಂಜೆ ಆಲಿಕಲ್ಲು ಮಳೆಯಾಗಿದ್ದು, ಯುಗಾದಿಗೂ ಮುನ್ನ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆದಿದೆ.
ಇದನ್ನೂ ಓದಿ ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?
ಗುಡುಗು-ಸಿಡಿಲಿನ ಆರ್ಭಟ ದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲದಿಂದ ಮಳೆ ಸುರಿಯುತ್ತಿದೆ. ಅದಕ್ಕೂ ಮುನ್ನ ಕೆಲ ಹೊತ್ತು ಮಳೆಯೊಂದಿಗೆ ಸುರಿದ ಆಲಿಕಲ್ಲಿನ ಧಾರೆಯಿಂದ ಶಿವಮೊಗ್ಗದ ರಸ್ತೆಗಳು ಹಾಲಿನ ಬಣ್ಣಕ್ಕೆ ತಿರುಗಿದವು.
ಆಲಿಕಲ್ಲಿನ ಹೊಡೆತಕ್ಕೆ ಮನೆಯ ಗಿಡ-ಮರ, ಮನೆಯ ಮುಂದೆ ನಿಲ್ಲಿಸಿದ ವಾಹನಗಳು ಸಿಲುಕಿ ನಲುಗಿದವು.
ಮನೆಯ ಮುಂದೆ, ಕಾಂಪೌಂಡ್ ಒಳಗೆ ಬಿದ್ದ ಆಲಿಕಲ್ಲುಗಳ ಹೆಕ್ಕಿ, ಬೊಗಸೆಯಲ್ಲಿ ತುಂಬಿಕೊಂಡು ನಿವಾಸಿಗಳು ಖುಷಿಪಟ್ಟರು.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ನಗರದ ಜೈಲ್ ರಸ್ತೆ ಕೆರೆಯಂತಾಗಿತ್ತು. ನಗರದ ಕೋಟೆ ರಸ್ತೆಯಲ್ಲಿ ಮರದ ಕೊಂಬೆ ಮುರಿದು ಬಿದ್ದರೆ ಮೆಗ್ಗಾನ್ ಆಸ್ಪತ್ರೆಯ ಸಮೀಪ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು.
ಇದನ್ನೂ ಓದಿ ತೀರ್ಥಹಳ್ಳಿ, ಪೊಲೀಸ್ ಗೌರವದೊಂದಿಗೆ ಆರ್‌ಎಸ್‌ಐ ಅಂತ್ಯಕ್ರಿಯೆ
ದ್ರಾಕ್ಷಿ, ದಾಳಿಂಬೆ, ಕಾಫಿ, ಮಾವು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸುವ ಆತಂಕವಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














