ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೈಟೆಕ್ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಡ್ರೋಣ್ ಕ್ಯಾಮೆರಾ ಬಳಸಿ ಅಕ್ರಮ ಇಸ್ಪೀಟ್ ಜೂಜಾಟದ ಅಡ್ಡವನ್ನು ಪತ್ತೆ ಹಚ್ಚಿ 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಮಹಿಳೆಗೆ ಕಾದಿತ್ತು ಆಘಾತ!, ಆಗಿದ್ದೇನು?
ಹೊಳೆಹೊನ್ನೂರು ಸಮೀಪದ ಜಂಬರಘಟ್ಟ ದೇವಸ್ಥಾನ ಹಾಗೂ ತಿಮ್ಮಪ್ಪನಮಟ್ಟಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಹೊಳೆಹೊನ್ನೂರು ಪೊಲೀಸರು, ಜೂಜುಕೋರರು ತಲೆಮರೆಸಿಕೊಳ್ಳದಂತೆ ತಡೆಯಲು ಡ್ರೋಣ್ ಕ್ಯಾಮೆರಾವನ್ನು ಗಗನಕ್ಕೆ ಹಾರಿಸಿ ಅಡ್ಡವನ್ನು ನಿಖರವಾಗಿ ಪತ್ತೆ ಹಚ್ಚಿದರು.
ಬಳಿಕ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ ಪೊಲೀಸರು ರಮೇಶ್, ರಂಗೇಶ್, ಸುದೀಪ್, ನಯಾಜ್, ಅಬೀದ್ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಜೂಜಾಟಕ್ಕೆ ಬಳಸಿದ್ದ ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ > > ಹೃದಯಾಘಾತದಿಂದ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ನಿಧನ!
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














