ಭದ್ರಾವತಿ : ನಗರದಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ದ್ವಿಚಕ ವಾಹನಗಳ ತಪಾಸಣೆ ನಡೆಸಿ ನಂಬರ್ ಫ್ಲೇಟ್ ಹೊಂದಿಲ್ಲದ ಹಾಗು ದೋಷಪೂರಿತ ಸೈಲೆನ್ಸರ್ ಹೊಂದಿರುವ ಸುಮಾರು 35 ದ್ವಿಚಕ್ರ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ > > ಹೊಳೆಹೊನ್ನೂರು, ಡ್ರೋಣ್ ಬಳಸಿ ಪೊಲೀಸ್ ದಾಳಿ, 5 ಜನರ ಬಂಧನ
ಪೊಲೀಸ್ ನಗರ ವೃತ ನಿರೀಕ್ಷಕಿ ನಾಗಮ್ಮರವರ ನೇತೃತ್ವ ದಲ್ಲಿ ಸಂಚಾರಿ ಠಾಣೆಯ ಉಪ ನಿರೀಕ್ಷಕರಾದ ಚಂದ್ರ ಶೇಖರ ನಾಯ್ಕ ಹಾಗು ರಾಜೇಶ್ ಸಂಗೊಳ್ಳಿ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಚರಣೆ ನಡೆಸಿದ್ದು, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ವಾಹನ ಚಾಲಕರು ಮತ್ತು ಮಾಲೀಕರ ವಾಹನ ದಾಖಲಾತಿಗಳನ್ನು ಪರಿ ಶೀಲಿಸಿ ಸಂಚಾರಿ ನಿಯಮ ಗಳ ಕುರಿತು ಜಾಗೃತಿ ಮೂಡಿಸಿದರು.
ಇದನ್ನೂ ಓದಿ > > ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಮಹಿಳೆಗೆ ಕಾದಿತ್ತು ಆಘಾತ!, ಆಗಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಅಲ್ಲದೆ ಅಪಘಾತ ಪ ಕರಣಗಳು ಸಹ ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯಿಂದ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ವಾಹನ ಚಾಲಕರು, ಮಾಲೀಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ಕೋರಿದೆ.














