• About Us
  • Advertise
  • Privacy & Policy
  • Contact Us
Tuesday, July 28, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಸ್ತ್ರೀ ಸಂವೇದನೆ ಅಂತರಾಳದಲ್ಲಿ ಮಹತ್ವ ಪಡೆಯಬೇಕಿದೆ 

ಕಸ್ತೂರಬಾ ಪದವಿಪೂರ್ವ ಕಾಲೇಜಿನಲ್ಲಿ ಕಸಾಪ ದತ್ತಿ ಉಪನ್ಯಾಸ | ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
July 23, 2026
in ಶಿವಮೊಗ್ಗ
ಸ್ತ್ರೀ ಸಂವೇದನೆ ಅಂತರಾಳದಲ್ಲಿ ಮಹತ್ವ ಪಡೆಯಬೇಕಿದೆ 
Share on FacebookShare on TwitterShare on WhatsApp
ಶಿವಮೊಗ್ಗ: ಹೆಣ್ಣುಮಕ್ಕಳು ಇಂದಿನ ಸಮಾಜದಲ್ಲಿ ಎದುರಿಸುತ್ತಿರುವ ವಿವಿಧ ಸಾಮಾಜಿಕ ಹಾಗೂ ಮಾನಸಿಕ ಸವಾಲುಗಳನ್ನು ಅರ್ಥಮಾಡಿಕೊಂಡು, ಅಂತರಾಳದ ಮಹತ್ವದೊಂದಿಗೆ ಅಗತ್ಯ ಬೆಂಬಲ ಮತ್ತು ನ್ಯಾಯಯುತ ಸ್ಪಂದನೆ ನೀಡಿದಾಗ ಮಾತ್ರ ನಿಜವಾದ ಸ್ತ್ರೀ ಸಂವೇದನೆ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ದತ್ತಿನಿಧಿ ಕಾರ್ಯಕ್ರಮಗಳು ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾಜಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವ ಇಂದಿಗೂ ಸಮಾಜಕ್ಕೆ ಆದರ್ಶವಾಗಿದೆ.
ಇದನ್ನೂ ಓದಿ > > ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಮಹಿಳೆಗೆ ಕಾದಿತ್ತು ಆಘಾತ!, ಆಗಿದ್ದೇನು?
ಸ್ತ್ರೀ ಸಂವೇದನೆಗೆ ಯಾವುದೇ ಸಿದ್ಧಾಂತಗಳಿಗಿಂತ, ಮಾನವೀಯತೆ ಮತ್ತು ಅಂತರಾಳದ ಕಾಳಜಿಯೇ ಮುಖ್ಯ. ವಚನಗಾರರು ತಮ್ಮ ಬರಹಗಳ ಮೂಲಕ ಸ್ತ್ರೀ ಸಮಾನತೆ ಹಾಗೂ ಸಂವೇದನೆಯ ಮಹತ್ವವನ್ನು ಸಾರಿದ್ದಾರೆ. ಹೊಸ ತಲೆಮಾರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿತ್ವ ಆತ್ಮವಿಶ್ವಾಸವನ್ನು ರೂಪಿಸುತ್ತವೆ. ಜ್ಞಾನವಂತರಿಗೆ ಮಾತ್ರ ಸಮಾಜದಲ್ಲಿ ನಿಜವಾದ ಗೌರವ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಿರಂತರವಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮೊದಲು ನಮ್ಮನ್ನು ನಾವು ಗೌರವಿಸಿಕೊಳ್ಳಲು ಪ್ರಾರಂಭಿಸುತ್ತೇವೆ.
ನಾಣ್ಯ ಸಂಗ್ರಹ ಹಾಗೂ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ನಾಣ್ಯಗಳು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಆರ್ಥಿಕ ವ್ಯವಸ್ಥೆಯ ಅಮೂಲ್ಯ ದಾಖಲೆಗಳಾಗಿವೆ. ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ನಾಣ್ಯಗಳ ಅಧ್ಯಯನ ಮಹತ್ವದ ಪೂರಕ ಸಾಧನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಭದ್ರಾವತಿ, ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ, 35 ಬೈಕ್ ವಶ!
ಸಾಹಿತಿ ಎಂ.ಬಿ.ನಟರಾಜ ಅವರು ಸ್ಥಾಪಿಸಿದ ಶಾಂತವೇರಿ ಗೋಪಾಲಗೌಡರ ಸ್ಮಾರಕ ದತ್ತಿಯ ಆಶಯದಂತೆ ಕನ್ನಡ ಸಾಹಿತ್ಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸ್ತ್ರೀ ಸಂವೇದನೆ ಕುರಿತು ಸಾಹಿತಿ ಡಾ.ಸಬಿತಾ ಬನ್ನಾಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸ್ತ್ರೀ ಸಂವೇದನೆ ಕುರಿತು ಸಮರ್ಪಕವಾಗಿ ಬರೆಯದೇ ಇರಲು ಏನು ಕಾರಣ ಎಂಬ ಪ್ರಶ್ನೆಯನ್ನು ನಾವು ಗಂಭೀರವಾಗಿ ಚಿಂತಿಸಬೇಕಿದೆ.
 ವಚನ ಚಳುವಳಿಯವರೆಗೆ ಸಾಹಿತ್ಯದಲ್ಲಿ, ಸ್ತ್ರೀ ಬದುಕು ಮತ್ತು ಅನುಭವಗಳಿಗೆ ಸಮರ್ಪಕವಾದ ಸಂವೇದನೆ ಕಾಣಿಸದಿರುವುದು ಗಮನಾರ್ಹ ಸಂಗತಿ. ಇಂದಿನ ಸಂದರ್ಭದಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಬದುಕಿನ ಅನುಭವಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಚರ್ಚಿಸುವ ಅಗತ್ಯವಿದೆ.
ಲೈಂಗಿಕ ಕಿರುಕುಳವು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಎದುರಾಗಬಹುದು. ಇಂತಹ ಕಿರುಕುಳಗಳಿಗೆ ಯಾರೂ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು. ಪರಸ್ಪರ ಸಹೋದರ-ಸಹೋದರಿಯರ ಭಾವನೆಯೊಂದಿಗೆ ಒಬ್ಬರನ್ನೊಬ್ಬರು ಗೌರವಿಸಿ, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿನರಾಜ್ ಹೆಗಡೆ ಸ್ಮಾರಕ ದತ್ತಿ ಆಶಯದಂತೆ ಶಿಕ್ಷಣ, ಇತಿಹಾಸ, ನಾಣ್ಯಗಳ ಸಂಗ್ರಹ ಮಹತ್ವ ಕುರಿತು ನಾಣ್ಯ ಸಂಗ್ರಹಕಾರರಾದ ಮೇರಿ ಡಿಸೋಜ ಮಾತನಾಡಿದರು.
ಇದನ್ನೂ ಓದಿ > > ಹೊಳೆಹೊನ್ನೂರು, ಡ್ರೋಣ್ ಬಳಸಿ ಪೊಲೀಸ್ ದಾಳಿ, 5 ಜನರ ಬಂಧನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿದರು‌. ಪ್ರಾಂಶುಪಾಲರಾದ ರವಿಕುಮಾರ್.ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿ ವಿದ್ಯಾರ್ಥಿನಿ ಹಂಸಿಕ ತಮ್ಮ ಸ್ವರಚಿತ ಕವನ ವಾಚಿಸಿದರು. ವಿದ್ಯಾರ್ಥಿನಿ ಚಂದನ ಪ್ರಾರ್ಥಿಸಿ, ಉಪನ್ಯಾಸಕಿ ಲಕ್ಷ್ಮೀ ನಿರೂಪಿಸಿದರು.
Tags: kannada newskannada news livelatest newsmalnad newsshimogashivamoggaWomen's sensitivity needs to be emphasized within.'ಭದ್ರಾವತಿ:ರಾಷ್ಟ್ರೀಯ ಶಿಕ್ಷಣ ಸಮಿತಿಶಿವಮೊಗ್ಗ
Previous Post

ಭದ್ರಾವತಿ, ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ, 35 ಬೈಕ್ ವಶ!

Next Post

ಶಿವಮೊಗ್ಗ, ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಯ ಬಂಧನ!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್!

ಶಿವಮೊಗ್ಗ, ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಯ ಬಂಧನ!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026
ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

ಆಯನೂರು ಬಳಿ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು

July 27, 2026
ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

ಆಗುಂಬೆ ಘಾಟಿಯಲ್ಲಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ!

July 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

ಭೀಕರ ಕಾರು ಅಪಘಾತ, ದಾವಣಗೆರೆ ಮೂಲದ ವ್ಯಕ್ತಿ ಸಾವು!

July 28, 2026
ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

ಶಿವಮೊಗ್ಗದಲ್ಲಿ 1 ಕೆಜಿ 207 ಗ್ರಾಂ ಗಾಂಜಾ ವಶ, ಯುವಕನ ಬಂಧನ

July 27, 2026

Copyright © 2026 Yuva Dhwani. Designed by KIPL