ಶಿವಮೊಗ್ಗ : ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ ನಂಬಿಸಿ, ವ್ಯಕ್ತಿಯಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರ ತಾಲೂಕು ಕೊರ್ಲಿಕೊಪ್ಪ ಗ್ರಾಮದ ನಿವಾಸಿ ಸುರೇಶ್ (38) ಬಂಧಿತ ಆರೋಪಿ. ಈತನಿಂದ 5.20 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ > > ಹೊಳೆಹೊನ್ನೂರು, ಡ್ರೋಣ್ ಬಳಸಿ ಪೊಲೀಸ್ ದಾಳಿ, 5 ಜನರ ಬಂಧನ
ಸೊರಬ ತಾಲೂಕಿನ ಇಂಡಿಹಳ್ಳಿಯ ನಿವಾಸಿ, ದೂರುದಾರರಾದ ಅಣ್ಣಪ್ಪ ಎಂಬುವರಿಗೆ ಆರೋಪಿಯು, ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ 5,50,000 ರೂ ಪಡೆದು ಮೋಸ ಮಾಡಿದ್ದ. ಈ ಕುರಿತಂತೆ ದೂರುದಾರರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ > > ಸ್ತ್ರೀ ಸಂವೇದನೆ ಅಂತರಾಳದಲ್ಲಿ ಮಹತ್ವ ಪಡೆಯಬೇಕಿದೆ
ಸೊರಬ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ಎಂ ಹೆಚ್, ಸಿಬ್ಬಂದಿಗಳಾದ ಕೊಟ್ರೇಶಪ್ಪ ಎಸ್, ಗಿರೀಶ್ ಕೆ ಹೆಚ್, ರಾಜುನಾಯ್ಕ ಎಲ್, ರಾಘವೇಂದ್ರ, ವಿನಯ್ ರವರು ಹನಗವಾಡಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.














