ಶಿವಮೊಗ್ಗ: ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಸಾ ವತಿಯಿಂದ ನ.14 ಮತ್ತು 15ರಂದು ಆಯೋಜಿಸಿರುವ ‘ನಾಸಾ ಸ್ಪೇಸ್ ಚಾಲೆಂಜ್’ ಜಾಗತಿಕ ಹ್ಯಾಕಥಾನ್ ಕಾರ್ಯಕ್ರಮಕ್ಕೆ, 8ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಬಹುದಾಗಿದ್ದು, ಉಚಿತ ನೊಂದಣಿಗೆ ಆಹ್ವಾನಿಸಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ಸೂಡಾ ನೂತನ ಅಧ್ಯಕ್ಷರಾಗಿ ಮಧುಸೂದನ್ ನೇಮಕ
1 ರಿಂದ 6 ಸದಸ್ಯರವೆಗೆ, ವಿಜ್ಞಾನ, ಕೋಡಿಂಗ್, ವಿನ್ಯಾಸ, ಸಂಶೋಧನೆ ಮತ್ತು ಸೃಜನಶೀಲತೆಯಲ್ಲಿ ಆಸಕ್ತಿ ಹೊಂದಿರುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಂಡ ರಚಿಸಿಕೊಂಡು ಭಾಗವಹಿಸಬಹುದು.
ಇದನ್ನೂ ಓದಿ > > ಕೆಲಸವಿಲ್ಲದೆ ಸಾಲದ ಒತ್ತಡ, ಸಾಗರದಲ್ಲಿ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ನಾಸಾ ಹಾಗೂ ಅದರ ಪಾಲುದಾರ ಬಾಹ್ಯಾಕಾಶ ಸಂಸ್ಥೆಗಳ ಮುಕ್ತ ದತ್ತಾಂಶವನ್ನು ಬಳಸಿಕೊಂಡು ಭೂಮಿ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ನೈಜ ಸಮಸ್ಯೆಗಳಿಗೆ ತಾಂತ್ರಿಕ ಹಾಗೂ ಸೃಜನಾತ್ಮಕ ಪರಿಹಾರಗಳನ್ನು ರೂಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ನೊಂದಣಿಗಾಗಿ ವಿದ್ಯಾರ್ಥಿ ಸಂಯೋಜಕರಾದ ಐಶ್ವರ್ಯ.ಎಂ – 8217013839 ಹಾಗೂ ಅನನ್ಯ.ಎ – 8073653664 ಅವರನ್ನು ಸಂಪರ್ಕಿಸಲು ಕೋರಿದೆ.
ಇದನ್ನೂ ಓದಿ > > ಶಿವಮೊಗ್ಗ, 5 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ, ಏನಿದು ಪ್ರಕರಣ?














