• About Us
  • Advertise
  • Privacy & Policy
  • Contact Us
Tuesday, October 27, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಗ್ರಾಮೀಣ ಮಕ್ಕಳ ಅಪ್ರತಿಮ ಸಾಧನೆಗೆ ಜೆಎನ್‌ಎನ್‌ಸಿಇ ಸಾಕ್ಷಿ

ವಿಟಿಯು ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳೊಂದಿಗೆ ಸಂವಾದ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
October 8, 2026
in ಶಿವಮೊಗ್ಗ
ಗ್ರಾಮೀಣ ಮಕ್ಕಳ ಅಪ್ರತಿಮ ಸಾಧನೆಗೆ ಜೆಎನ್‌ಎನ್‌ಸಿಇ ಸಾಕ್ಷಿ
Share on FacebookShare on TwitterShare on WhatsApp
ಶಿವಮೊಗ್ಗ: ಮಣ್ಣಿನ ಘಮಲಿನಿಂದ ಬಂದ ಕನಸುಗಳು, ಪೋಷಕರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ವಿದ್ಯಾಸಂಸ್ಥೆ ನೀಡಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ಅರಳುತ್ತದೆ ಎಂಬುದಕ್ಕೆ ಜೆಎನ್‌ಎನ್‌ಸಿಇಯ ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳ ಯಶೋಗಾಥೆ ಸಾಕ್ಷಿಯಾಯಿತು.

ಕಣ್ಣಲ್ಲಿ ಸಾಧನೆಯ ಹೊಳಪು, ಮಾತಿನಲ್ಲಿ ಪೋಷಕರ ಮೇಲಿನ ಕೃತಜ್ಞತೆ, ನೆನಪಿನಲ್ಲಿ ಕಾಲೇಜಿನ ದಿನಗಳು… ತಮ್ಮ ಯಶಸ್ಸಿನ ಕಥೆಯನ್ನು ವಿದ್ಯಾರ್ಥಿಗಳು ಹಂಚಿಕೊಳ್ಳುತ್ತಿದ್ದಂತೆ, ಅವರ ಹಿಂದೆ ನಿಂತಿದ್ದ ಪೋಷಕರ ಪರಿಶ್ರಮವೂ ವೇದಿಕೆಯಲ್ಲಿ ಜೀವಂತವಾಗಿತ್ತು. ದೂರದ ಹಳ್ಳಿಗಳಿಂದ ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಬಂದವರು, ಹಾಸ್ಟೆಲ್‌ನಲ್ಲಿ ಉಳಿದು ಓದಿದವರು, ಕೃಷಿಕ ಕುಟುಂಬದಿಂದ ಬಂದವರು, ಸಣ್ಣ ಉದ್ಯಮಿಗಳ ಮಕ್ಕಳು… ಹೀಗೆ ಬದುಕಿನ ಹಲವು ಹಿನ್ನಲೆಗಳಿಂದ ಬಂದ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ತಮ್ಮ ಸಾಧನೆಯ ಪುಟಗಳನ್ನು ತೆರೆದಿಟ್ಟರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಕಚೇರಿಯಲ್ಲಿ ಬುಧವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರ‍್ಯಾಂಕ್‌ ವಿಜೇತ ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಮಾಧ್ಯಮಗೋಷ್ಠಿ ಈ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಇದನ್ನೂ ಓದಿ > > ಮನೆ ಮೇಲೆ ಪಲ್ಟಿಯಾದ ಪ್ರವಾಸಿ ಬಸ್, ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು!

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಹಾಗೂ 7 ಚಿನ್ನದ ಪದಕಗಳನ್ನು ಪಡೆದ ಧನ್ಯಶ್ರೀ ಬಿ.ಎಂ. ಮಾತನಾಡಿ, ಆಯನೂರು ಸಮೀಪದ ಸಿರಿಗೆರೆ ಗ್ರಾಮದವರಾದ ತಾವು ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಪ್ರಯಾಣಿಸಿ ಶಿಕ್ಷಣ ಪಡೆದಿರುವುದಾಗಿ ತಿಳಿಸಿದರು. ಪೋಷಕರು ಕೃಷಿಕರಾಗಿದ್ದು, ಅವರ ಪರಿಶ್ರಮ ಮತ್ತು ಪ್ರೋತ್ಸಾಹವೇ ತಮ್ಮ ಸಾಧನೆಗೆ ಪ್ರಮುಖ ಕಾರಣ ಎಂದರು. 9.44 ಸಿಜಿಪಿಎ ಗಳಿಸಿರುವ ತಾವು ಎಂಟು ಪದಕಗಳ ನಿರೀಕ್ಷೆಯಲ್ಲಿದ್ದೆ. ಪ್ರಸ್ತುತ ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾಗಿ ಹೇಳಿದರು.

ಎಲೆಕ್ಟ್ರಿಕಲ್‌ ಮತ್ತು ಟೆಲಿಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದ ನಯ್ಯರ್ ಫಾತಿಮಾ ಅಫ್ರೀನ್ ತಾವು ಮೂಲತಃ ತರೀಕೆರೆ ತಾಲೂಕಿನವರಾಗಿದ್ದು, ತಂದೆ ಸರ್ಕಾರಿ ವಕೀಲರು ಹಾಗೂ ತಾಯಿ ಸರ್ಕಾರಿ ಶಿಕ್ಷಕಿಯಾಗಿದ್ದಾರೆ ಎಂದು ತಿಳಿಸಿದರು.

4ನೇ ರ‍್ಯಾಂಕ್‌ ಪಡೆದ ಯಶಸ್ಕರ ಟಿ.ಜಿ. ಮಾತನಾಡಿ, ತಾವು ಶೃಂಗೇರಿಯವರಾಗಿದ್ದು, ತಂದೆ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

5ನೇ ರ‍್ಯಾಂಕ್‌ ಪಡೆದ ಭೂಮಿಕಾ ಎಂ. ತಾವು ಸಾಗರದವರಾಗಿದ್ದು, ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಶಿಕ್ಷಣ ಪಡೆದಿರುವುದಾಗಿ ಹೇಳಿದರು. ಪೋಷಕರು ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾಲೇಜು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.

6ನೇ ರ‍್ಯಾಂಕ್‌ ಪಡೆದ ಜಾರ್ಜ್‌ ಟಿ. ಪೌಲ್‌ ಮಾತನಾಡಿ, ತಾವು ಎನ್.ಆರ್.ಪುರದ ಕೃಷಿಕ ಕುಟುಂಬದವರಾಗಿದ್ದು, ಪೋಷಕರ ಬೆಂಬಲ ತಮ್ಮ ಸಾಧನೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

8ನೇ ರ‍್ಯಾಂಕ್‌ ಪಡೆದ ನಿತ್ಯಶ್ರೀ ಹೆಗಡೆ ಕೆ.ಎನ್. ತಾವು ತೀರ್ಥಹಳ್ಳಿಯ ರೈತಾಪಿ ಕುಟುಂಬದಿಂದ ಬಂದವರಾಗಿದ್ದು, ಸವಾಲಿನ ಬದುಕಿನ ನಡುವೆಯೂ ಜೆಎನ್‌ಎನ್‌ಸಿಇ ಉತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದರು. ಪ್ರಸ್ತುತ ಟಿಸಿಎಸ್‌ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದಾಗಿ ಸಂತಸ ಹಂಚಿಕೊಂಡರು.

10ನೇ ರ‍್ಯಾಂಕ್‌ ಪಡೆದ ಸ್ವಾತಿ ಎಸ್.ಜಿ. ತಾವು ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಕೃಷಿ ಹಿನ್ನೆಲೆಯ ಕುಟುಂಬದವರಾಗಿದ್ದು, ಜೆಎನ್‌ಎನ್‌ಸಿಇ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ವಿದ್ಯಾಭ್ಯಾಸ ನಡೆಸಿರುವುದಾಗಿ ತಿಳಿಸಿದರು.

ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್‌ ಮಾತನಾಡಿ, ಮಲೆನಾಡಿನ ವಿದ್ಯಾರ್ಥಿಗಳು ಪಿಯುಸಿ ನಂತರ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲದಂತೆ, ತಮ್ಮದೇ ಪ್ರದೇಶದಲ್ಲಿ ಉತ್ಕೃಷ್ಟ ಶಿಕ್ಷಣ ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಜೆಎನ್‌ಎನ್‌ಸಿಇಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಅವರ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನಿಟ್ಟಿನಲ್ಲಿ ಸ್ಟಾರ್ಟ್‌ಅಪ್‌ಗಳನ್ನು ರೂಪಿಸಲು ಅಗತ್ಯವಾದ ಪ್ರೇರಕ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಾಲೇಜಿನ 40 ವಿದ್ಯಾರ್ಥಿಗಳು ವಿಟಿಯು ಬಿ.ಇ. ಆನರ್ಸ್‌ ಪದವಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸ್ವಯಂ–ಎನ್‌ಪಿಟಿಇಎಲ್‌ ಪ್ರಮಾಣಪತ್ರ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು 1,315 ವಿದ್ಯಾರ್ಥಿಗಳು ಎನ್‌ಪಿಟಿಇಎಲ್‌ ಪ್ರಮಾಣಪತ್ರಗಳನ್ನು ಪಡೆದು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ > > ಧಗಧಗ ಹೊತ್ತಿ ಉರಿದ ಬಸ್, ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ!

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿದರು. ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಪಿ. ಮೈಲಾರಪ್ಪ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಎಂ.ಎಸ್. ಅನಂತದತ್ತ, ಜಿ.ಎನ್. ಸುಧೀರ್, ಕುಲಸಚಿವರಾದ ಎನ್‌.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್‌.ರಾಮಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸಂಜೀವ್ ಕುಂಟೆ, ಡಾ. ಚೇತನ್ ಕೆ.ಆರ್., ಡಾ. ಸುರೇಂದ್ರ, ಡಾ. ಎಚ್.ಬಿ. ಸುರೇಶ್, ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags: JNNCE Witnesses the Remarkable Achievements of Rural Childrenkannada newskannada news livelatest newsmalnad newsSAGARANEWSshimogashivamoggaರಾಷ್ಟ್ರೀಯ ಶಿಕ್ಷಣ ಸಮಿತಿಶಿವಮೊಗ್ಗ
Previous Post

ತೀರ್ಥಹಳ್ಳಿ, ಪತಿ, ಅತ್ತೆಗೆ 10 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?

Next Post

ಒತ್ತಡ ನಿಭಾಯಿಸುವ ಕುರಿತು ಜೆಎನ್‌ಎನ್‌ಸಿಇಯಲ್ಲಿ ವಿಶೇಷ ಉಪನ್ಯಾಸ

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಒತ್ತಡ ನಿಭಾಯಿಸುವ ಕುರಿತು ಜೆಎನ್‌ಎನ್‌ಸಿಇಯಲ್ಲಿ ವಿಶೇಷ ಉಪನ್ಯಾಸ

ಒತ್ತಡ ನಿಭಾಯಿಸುವ ಕುರಿತು ಜೆಎನ್‌ಎನ್‌ಸಿಇಯಲ್ಲಿ ವಿಶೇಷ ಉಪನ್ಯಾಸ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

October 27, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಆಘಾತ, ಬಾಲಕ ಸಾವು!

October 27, 2026
ಸೊರಬ, ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ಪ್ರದಾನ

ಸೊರಬ, ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ಪ್ರದಾನ

October 27, 2026
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

October 27, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಆಘಾತ, ಬಾಲಕ ಸಾವು!

October 27, 2026

Copyright © 2026 Yuva Dhwani. Designed by KIPL