ಶಿವಮೊಗ್ಗ : ಸವಳಂಗ ರಸ್ತೆಯ ಕೊಮ್ಮನಾಳು ಸಮೀಪದ ಖಾಸಗಿ ಶಾಲೆ ಬಳಿ – ರಾತ್ರಿ ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಮ್ಮನಾಳು ಗ್ರಾಮದ ಲಿಖಿತ್ ಮತ್ತು ಬಿಕ್ಕೋನಹಳ್ಳಿಯ ದೀಪು ಬಂಧಿತರು.
ಇದನ್ನೂ ಓದಿ > > ಅಡಿಕೆ ತೋಟಕ್ಕೆ ನುಗ್ಗಿದ ಬಸ್, ಓರ್ವ ಸಾವು, | ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಹೊಸನಗರ ತಾಲೂಕಿನ ಮತ್ತಲಿ ಜಡ್ಡು ಗ್ರಾಮದ ರೈತ ಆರ್.ಸುಭಾಷ್ ದರೋಡೆಗೆ ಒಳಗಾದವರು. ಆರೋಪಿಗಳು ಆ.14ರ ರಾತ್ರಿ ಸುಭಾಷ್ ಅವರನ್ನು ಬೆದರಿಸಿ 2 ಸಾವಿರ ರೂ. ನಗದು ಹಾಗೂ 90 ಸಾವಿರ ಮೌಲ್ಯದ 6 ಗ್ರಾಂ ಚಿನ್ನದ ಬ್ರಾಸ್‌ಲೆಟ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ > > ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಎಲ್ಲೇಲ್ಲಿ?
ಸುಭಾಷ್ ಅವರು ತಮ್ಮ ಕಾರಿನಲ್ಲಿ ಸ್ವಂತ ಕೆಲಸದ ನಿಮಿತ್ತ ಸವಳಂಗಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಹಿಂದಿರುಗುವಾಗ ಶಾಲೆ ಬಳಿ ಕಾರು ನಿಲ್ಲಿಸಿದ್ದರು. ಹಿಂಬದಿಯಿಂದ ಬಂದ ಇಬ್ಬರು ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ > > ದಿನಕ್ಕೊಂದು ಕಥೆ | ತಪ್ಪು ತೋರಿಸುವವರು ಅನೇಕ, ಸರಿಪಡಿಸುವವರು ಯಾರು?














