ಶಿವಮೊಗ್ಗ: ಅಲ್ಲಿ ರೋಬೊಗಳ ನಡುವಿನ ಜಿದ್ದಾಜಿದ್ದಿಗೆ ಸ್ಪರ್ಧಾಕಣ ಸಾಕ್ಷಿಯಾಗಿತ್ತು. ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡಗಳು, ತಾವು ವಿನ್ಯಾಸಗೊಳಿಸಿದ್ದ ರೋಬೊಗಳೊಂದಿಗೆ ಅಖಾಡಕ್ಕಿಳಿದಿದ್ದವು. ಒಂದನ್ನೊಂದು ಮೀರಿಸುವ ಭರದಲ್ಲಿ ‘ನಾ ಮುಂದು, ತಾ ಮುಂದು’ ಎಂಬಂತೆ ಸೆಣಸಾಡುತ್ತಿದ್ದವು.
ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ಐಇಟಿಇ (IETE), ಐಎಸ್ಟಿಇ (ISTE) ಹಾಗೂ ಐಇಇಇ (IEEE) ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಅಂತರ ಕಾಲೇಜು ತಾಂತ್ರಿಕ ಉತ್ಸವ ‘ಪ್ಲಾಸ್ಮಾ-2026’ ಇಂತಹ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ವಾಟ್ಸಪ್ ಗ್ರೂಪ್ : ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ವಿವಿಧ ಜಿಲ್ಲೆಗಳ 163 ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡು, ತಮ್ಮ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಅನ್ವೇಷಣಾ ಸಾಮರ್ಥ್ಯವನ್ನು ಅನಾವರಣಗೊಳಿಸಿದವು.
ಕಾರ್ಯಕ್ರಮವನ್ನು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್. ಅರುಣ್ ಉದ್ಘಾಟಿಸಿದರು. ಬೆಂಗಳೂರಿನ ಎಲಿ ಲಿಲ್ಲಿ ಅಂಡ್ ಕಂಪನಿಯ ಅಡ್ವಾನ್ಸ್ಡ್ ಇಂಟೆಲಿಜೆನ್ಸ್ ಅಂಡ್ ರಿಸರ್ಚ್ ವಿಭಾಗದ ಹಿರಿಯ ಎಐ-ಎಂಎಲ್ ಎಂಜಿನಿಯರ್ ಶ್ರೇಯಸ್ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಪ್ರಮೋದ್ ಕುಮಾರ್, ಸಂಶೋಧನೆ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಡಾ. ಶರತ್ ಎಸ್.ಎಂ., ಡಾ. ಶ್ವೇತಾ ಎಚ್.ಆರ್., ಅಜಯ್ ಬೆಟೂರು ಪಿ., ಪ್ರದೀಪ ಎಸ್.ಸಿ., ಶ್ವೇತಾ ಬಿ. ಹಾಗೂ ಅಭಿಜಿತ್ ಎನ್. ಉಪಸ್ಥಿತರಿದ್ದರು.
ಇದನ್ನೂ ಓದಿ > >ರಾಗಿಗಿಂತ ಕಲ್ಲು, ಮಣ್ಣೇ ಹೆಚ್ಚು! ಪಡಿತರ ಫಲಾನುಭವಿಗಳ ಆಕ್ರೋಶ!
ಏಳು ಸ್ಪರ್ಧೆಗಳಲ್ಲಿ ವಿಜೇತ ತಂಡಗಳ ಸಾಧನೆ
- ಮೇಜ್ ಫಾಲೋವರ್ ಸ್ಫರ್ಧೆಯಲ್ಲಿ ಜೆಎನ್‌ಎನ್‌ಸಿಇ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ಗುಬ್ಬಿಯ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ತಂಡ ತೃತೀಯ ಬಹುಮಾನ ಪಡೆದಿದೆ.
- ರೋಬೋ ಸಾಕರ್ ಸ್ಫರ್ಧೆಯಲ್ಲಿ ಸಿಐಟಿ ಗುಬ್ಬಿ ತಂಡ ಪ್ರಥಮ, ಮೂಡುಬಿದಿರೆ ಎನೆಪೊಯಾ ಕಾಲೇಜಿನ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.
- ರೋಬೋ ರೇಸ್ ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡ ಪ್ರಥಮ, ವಿಟಿಯು ಬೆಳಗಾವಿಯ ತಂಡ ದ್ವಿತೀಯ ಹಾಗೂ ಸಿಐಟಿ ಗುಬ್ಬಿ ತಂಡ ತೃತೀಯ ಸ್ಥಾನ ಗಳಿಸಿತು.
- ರೋಬೋ ಟಗ್ ಆಫ್ ವಾರ್‌ನಲ್ಲಿ ಹುಬ್ಬಳ್ಳಿಯ ಕೆಎಲ್‌ಇಐಟಿಯ ತಂಡ ಪ್ರಥಮ, ವಿಟಿಯು ಬೆಳಗಾವಿಯ ತಂಡ ದ್ವಿತೀಯ ಹಾಗೂ ದಾವಣಗೆರೆಯ ಜಿಎಂಐಟಿಯ ತಂಡ ತೃತೀಯ ಸ್ಥಾನ ಪಡೆಯಿತು.
- ಹಾರ್ಡ್‌ವೇರ್ ಹ್ಯಾಕಥಾನ್‌ನಲ್ಲಿ ಹಾಸನದ ನವಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡ ಪ್ರಥಮ, ಜೆಎನ್‌ಎನ್‌ಸಿಇ ತಂಡ ದ್ವಿತೀಯ ಹಾಗೂ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ತಂಡ ತೃತೀಯ ಸ್ಥಾನ ಗಳಿಸಿತು.
- ಸುಮೊ ವಾರ್‌ನಲ್ಲಿ ದಾವಣಗೆರೆಯ ಜಿಎಂಐಟಿಯ ತಂಡ ಪ್ರಥಮ, ಮೂಡುಬಿದಿರೆಯ ಎನೆಪೋಯ ಕಾಲೇಜಿನ ತಂಡ ದ್ವಿತೀಯ ಹಾಗೂ ಸಿಐಟಿ ಗುಬ್ಬಿಯ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
- ಲೈನ್ ಫಾಲೋವರ್‌ನಲ್ಲಿ ಬಂಟಕಲ್‌ನ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಗಳು ಪ್ರಥಮ, ದ್ವಿತೀಯ ಹಾಗೂ ಜೆಎನ್‌ಎನ್‌ಸಿಇ ತಂಡ ತೃತೀಯ ಸ್ಥಾನ ಗಳಿಸಿದೆ.













