• About Us
  • Advertise
  • Privacy & Policy
  • Contact Us
Wednesday, May 6, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ವಿಶೇಷ

ಶಿವಮೊಗ್ಗ, ಸ್ವಯಂಗಣತಿ ಅಂತ್ಯ, ಇಂದಿನಿಂದ ಮನೆಗಣತಿ ಆರಂಭ

ಒಂದು ತಿಂಗಳ ಕಾಲ ಮನೆ ಗಣತಿ | ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಗಳು ಮತ್ತಿತರ ಮಾಹಿತಿ ಸಂಗ್ರಹ

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
April 16, 2026
in ವಿಶೇಷ
ಸಂಗ್ರಹ ಚಿತ್ರ
Share on FacebookShare on TwitterShare on WhatsApp

ಶಿವಮೊಗ್ಗ:  ಭಾರತದ ಜನಗಣತಿ-2027ರ ಭಾಗವಾಗಿ ಶಿವಮೊಗ್ಗ ಸೇರಿದಂತೆ ಕರ್ನಾಟಕದಲ್ಲಿ ಏ.1ರಿಂದ ಆರಂಭವಾದ ಸ್ವಯಂ ಗಣತಿ ಏ.15ರ ನಿನ್ನೆ ಮುಗಿದಿದ್ದು, ಏ.16ರ ಇಂದಿನಿಂದ ಮೇ.15ರ ವರೆಗೆ ಒಂದು ತಿಂಗಳ ಮನೆ ಗಣತಿ  ನಡೆಯಲಿದೆ. ಗಣತಿದಾರರು ಮನೆ ಮನೆಗೆ ತೆರಳಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಗಳು ಮತ್ತಿತರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.

ಇದನ್ನೂ ಓದಿ > ಹಾವು ಕಚ್ಚಿ ಎರಡೂವರೆ ವರ್ಷದ ಮಗು ಸಾವು

ಗಣತಿ ಕಾರ್ಯಕ್ಕೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ 350ಕ್ಕೂ ಹೆಚ್ಚು ಹಾಗೂ ಶಿವಮೊಗ್ಗ ನಗರದಲ್ಲಿ 140 ಕ್ಕೂ ಹೆಚ್ಚು, ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ.
16 ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿಯು ಜನಗಣತಿಯ ಮೊದಲ ಹಂತವಾಗಿದೆ. ಮೊದಲ ಹಂತದಲ್ಲಿ ಜನಗಣತಿಗೆ 33 ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕರ್ನಾಟಕ ಸೇರಿ ಏಳು ರಾಜ್ಯದಲ್ಲಿ ಸೆ.20ರವರೆಗೆ ಜನಗಣತಿ ನಡೆಯಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ 2ನೇ ಹಂತದ ಎಣಿಕೆ ನಡೆಯಲಿದ್ದು, ಆ ಸಂದರ್ಭದಲ್ಲಿ ಜನಸಂಖ್ಯೆ ಎಣಿಕೆ ಮಾಡಲಾಗುತ್ತದೆ. ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ, ಆರ್ಥಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ > ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ಶಿವಮೊಗ್ಗ ಜಿಲ್ಲಾಡಳಿತದಿಂದ ಶಿವಮೊಗ್ಗ ಗ್ರಾಮಾಂತರ ವಿಭಾಗದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಜನ ಗಣತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ನಿಖರವಾಗಿ ನಡೆಸುವಂತೆ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ನಿರ್ದೇಶನ ನೀಡಿದರು.
ತಹಶೀಲ್ದಾರ್‌ಗಳು, ಮೇಲ್ವಿಚಾರಕರು ಮತ್ತು ಗಣತಿದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಪ್ರತಿಯೊಂದು ಮನೆ ಮತ್ತು ಪ್ರದೇಶದ ನಿವಾಸಿಗಳನ್ನು ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಒಳಪಡಿಸಬೇಕು. ಯಾವುದೇ ಒಂದು ಕುಟುಂಬವೂ ಗಣತಿಯಿಂದ ವಂಚಿತವಾಗಬಾರದು. ಗಣತಿಗಾಗಿ ಬಳಸಲಾಗುವ ಡಿಜಿಟಲ್ ಪೋರ್ಟಲ್‌ಗಳಲ್ಲಿ ದತ್ತಾಂಶವನ್ನು ದಾಖಲಿಸುವಾಗ ತಾಂತ್ರಿಕ ದೋಷಗಳಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಗಣತಿ ಸಂದರ್ಭದಲ್ಲಿ ನಡೆಯುವ ಎಲ್ಲಾ ವೈಯಕ್ತಿಕ ದತ್ತಾಂಶಗಳ ಗೌಪ್ಯತೆ ಕಾಪಾಡಲಾಗುವುದು, ದತ್ತಾಂಶ ದುರುಪಯೋಗವಾಗುತ್ತದೆ ಎಂದು ಜನ ಭಯಪಡುವುದು ಬೇಡ ಹೀಗಾಗಿ ಜನರು ತಪ್ಪದೇ ಗಣತಿಯಲ್ಲಿ ಪಾಲ್ಗೊಂಡು ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Tags: household census beginshousehold census begins todaykannada newskannada news livelatest newsmalnad newsSelf-enumeration endsshivamoggaಶಿವಮೊಗ್ಗ
Previous Post

ಹಾವು ಕಚ್ಚಿ ಎರಡೂವರೆ ವರ್ಷದ ಮಗು ಸಾವು

Next Post

ತೀರ್ಥಹಳ್ಳಿ, ಮದುವೆ ಮುಗಿಸಿ ಮನೆಗೆ ಬಂದ ಕುಟುಂಬಸ್ಥರಿಗೆ ಕಾದಿತ್ತು ಶಾಕ್!

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್!

ತೀರ್ಥಹಳ್ಳಿ, ಮದುವೆ ಮುಗಿಸಿ ಮನೆಗೆ ಬಂದ ಕುಟುಂಬಸ್ಥರಿಗೆ ಕಾದಿತ್ತು ಶಾಕ್!

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

ಶಿವಮೊಗ್ಗ | ತುಂಗಾ ನದಿ ಸೇತುವೆ ಮೇಲೆ ಖಾಸಗಿ ಬಸ್-ಟಿಟಿ ಮುಖಾಮುಖಿ ಡಿಕ್ಕಿ

January 26, 2026
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

ಶಿವಮೊಗ್ಗ ಸೀಗೆಹಟ್ಟಿಯ  ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ

2
ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

ಶಿವಮೊಗ್ಗ, ಖಾಸಗಿ ಬಸ್-ಆಟೋ ಮುಖಾಮುಖಿ ಡಿಕ್ಕಿ, ಓರ್ವ ಯುವಕ ಸಾವು

2
ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026
ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?

May 6, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಆನಂದಪುರ, ಹಾವು ಕಚ್ಚಿ ಗರ್ಭಿಣಿ ಸಾವು

May 6, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ವೇಶ್ಯಾವಾಟಿಕೆ | ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

ಭದ್ರಾವತಿಯ 6 ಯುವಕರಿಗೆ ಜೈಲು ಶಿಕ್ಷೆ! ಏನಿದು ಪ್ರಕರಣ?

May 6, 2026
ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ

May 6, 2026

Copyright © 2026 Yuva Dhwani. Designed by KIPL