ಶಿವಮೊಗ್ಗ:’ ಆರ್ಯವೈಶ್ಯ ಸ್ನೇಹಿತರ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರ ನೇತೃತ್ವದಲ್ಲಿ ದಿನಾಂಕ ಏಪ್ರಿಲ್ 3ರಂದು ನಗರದ ಅಲ್ಲಮಪ್ರಭು (ಫ್ರೀಡಂ ಪಾರ್ಕ್) ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾರ್ವಜನಿಕವಾಗಿ ‘ಶ್ರೀನಿವಾಸ ಕಲ್ಯಾಣ’ ಮಹೋತ್ಸವವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ ಸಾಗರ, ಫ್ಲೆಕ್ಸ್ ಅಳವಡಿಕೆಯಲ್ಲಿ ನಗರಸಭೆ ತಾರತಮ್ಯ, ಬಿಜೆಪಿ ಪ್ರತಿಭಟನೆ
ಅಂದು ಸಂಜೆ 5.30 ಗಂಟೆಗೆ ಶ್ರೀನಿವಾಸ-ಪದ್ಮಾವತಿ ವಿವಾಹ ಕಲ್ಯಾಣೋತ್ಸವವು ಸಕಲ ಮಂಗಳ ವಾದ್ಯಗಳ ನಾದದೊಂದಿಗೆ ವಿಜೃಂಭಣೆಯಿಂದ ಜರುಗಲಿದ್ದು, ಭಕ್ತಿಭಾವದಿಂದ ಕೂಡಿದ ಧಾರ್ಮಿಕ ವಾತಾವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಇದುವರೆಗೆ ಏಳುನೂರಕ್ಕೂ ಅಧಿಕ ಶ್ರೀನಿವಾಸ ಕಲ್ಯಾಣೋತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಶ್ರೀವಾರಿ ಫೌಂಡೇಷನ್ ನ ಶ್ರೀ ವೆಂಕಟೇಶ್ ಮೂರ್ತಿ ಇವರ ನೇತೃತ್ವದಲ್ಲಿ ಅನುಭವಸಂಪನ್ನ ಪುರೋಹಿತರ ತಂಡವು ವೇದಘೋಷಗಳೊಂದಿಗೆ, ವೈದಿಕ ಪರಂಪರೆಯ ಮಂತ್ರೋಚ್ಚಾರಣೆಗಳ ಮೂಲಕ ಶಾಸ್ತ್ರಬದ್ಧವಾಗಿ ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಶ್ರೀನಿವಾಸ-ಪದ್ಮಾವತಿ ಕಲ್ಯಾಣೋತ್ಸವವನ್ನು ನೆರವೇರಿಸಲಿದ್ದಾರೆ ಎಂದು ಡಿ.ಎಸ್. ಅರುಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ಶಿವಮೊಗ್ಗ, ನಾಳೆಯಿಂದ ಹೊಟೇಲ್‌ಗಳು ಬಂದ್?
ಈ ವಿಜೃಂಭಣೆಯ ಸತ್ಕಾರ್ಯದಲ್ಲಿ ಸಂಕಲ್ಪ ಸೇವೆಯ ಮೂಲಕ ನಿಗದಿತ ಶುಲ್ಕ ಪಾವತಿಸಿ ಸಾರ್ವಜನಿಕರು ಸಹ ಭಾಗವಹಿಸುವ ಅವಕಾಶವಿದ್ದು, ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರೀನಿವಾಸ-ಪದ್ಮಾವತಿಯರ ಕೃಪೆಗೆ ಪಾತ್ರರಾಗುವಂತೆ ಆರುಣ್ ರವರು ಕೋರಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














