ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.01ರ ಸೋಮಿನಕೊಪ್ಪದಲ್ಲಿ ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕಿ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ > ಶಿವಮೊಗ್ಗ, ಎ.ಟಿ.ಎನ್.ಸಿ.ಸಿ ಕಾಲೇಜಿಗೆ 5 ರ‍್ಯಾಂಕ್‌ಗಳ ಗರಿ
4 ವರ್ಷದ ಇರ್ಜಾ ಕೌನೇನ್ ಹಾಗೂ ಕೃಷ್ಣಾನಾಯ್ಕ್ ಬೀದಿ ನಾಯಿ ದಾಳಿಗೆ ತುತ್ತಾದವರು. ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೇ 6 ರ ಸಂಜೆ ಬಾಲಕಿ ಮೇಲೆ ನಾಯಿ ದಾಳಿ ನಡೆಸಿ, ಐದಾರು ಕಡೆ ಕಚ್ಚಿದೆ. ಬಾಲಕಿಯ ಕಿರುಚಾಟ ಗಮನಿಸಿ ನೆರೆಹೊರೆಯವರು ನಾಯಿಯನ್ನು ಓಡಿಸಿದ್ದಾರೆ. ಇಂದು ಬೆಳಿಗ್ಗೆ ಕೃಷ್ಣಾನಾಯ್ಕ್ ಎಂಬುವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಅವರ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ.
ಇದನ್ನೂ ಓದಿ > ಆರ್‌ಟಿಓ ಈ-ಚಲನ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ 4.34 ವಂಚನೆ
ಸೋಮಿನಕೊಪ್ಪದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ತಕ್ಷಣವೇ ಇವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಅವರು ಆಗ್ರಹಿಸಿದ್ದಾರೆ.













