ಶಿವಮೊಗ್ಗ: ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ಎ.ಟಿ.ಎನ್.ಸಿ.ಸಿ) ಬಿಕಾಂ ಮತ್ತು ಬಿಬಿಎ ವಿಭಾಗದ ವಿದ್ಯಾರ್ಥಿಗಳು, ಕುವೆಂಪು ವಿಶ್ವವಿದ್ಯಾಲಯದ 2024ನೇ ಸಾಲಿನಲ್ಲಿ ವಿವಿಧ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ > ಭದ್ರಾವತಿ, ಕಂಚಿನ ಬಾಗಿಲು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ, ಯಾವಾಗ?
ಬಿಬಿಎ ವಿಭಾಗದಲ್ಲಿ ವಿದ್ಯಾರ್ಥಿನಿ ತನುಶ್ರೀ.ಜೆ (ಪ್ರಥಮ) ರ‍್ಯಾಂಕ್ ಪಡೆದಿದ್ದು, ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿ.ಬಿ ಆಯಿಶಾ (ಆರನೇ) ರ‍್ಯಾಂಕ್ ಪಡೆದಿದ್ದಾರೆ. ಬಿಕಾಂ ವಿಭಾಗದಲ್ಲಿ ಪ್ರಾಚಿ ಜೈನ್ (ದ್ವಿತೀಯ), ಜಿ.ಎಂ.ವೈಷ್ಣವಿ (ಏಳನೇ), ಭರತ್.ಎಸ್.ಎನ್ (ಎಂಟನೇ) ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್, ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್.ಎಂ.ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಎನ್‌ಇಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಇದನ್ನೂ ಓದಿ > ಕಮಲಾ ನೆಹರು ರಾಷ್ಟ್ರೀಯ ಮಹಿಳಾ ಕಾಲೇಜಿನ ರಿಯಾ ಆಯಿಶಾಗೆ ಬಿಎ 9 ನೇ ರ್ಯಾಂಕ್














