ಬಸವಣ್ಣ – ಈ ಹೆಸರಿನಲ್ಲೇ ಏನೋ ಚೈತನ್ಯವಿದೆ.ನಮ್ಮ ವಿಶ್ವವೇ ಕಂಡ ಮಹಾನ್ ಸಮಾಜ ಸುಧಾರಕರಿವರು. ಬಸವಣ್ಣನವರ ತತ್ವ, ಆದರ್ಶಗಳು ಸದಾ ಕಾಲಕ್ಕೂ ಪ್ರಸ್ತುತ, 12ನೇ ಶತಮಾನದಲ್ಲಿ ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರು ಸಮಾಜದಲ್ಲಿರುವ ತಾರತಮ್ಯವನ್ನು ಮೇಲು ಕೀಳೆಂಬ ಭಾವನೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದ ಬಸವಣ್ಣನವರು ಸಮಾಜ ಸುಧಾರಣೆಯ ಕನಸು ಕಾಣುತ್ತಾ ಹೆಜ್ಜೆ ಇಟ್ಟಿದ್ದರು, ಈ ಹೋರಾಟದ ಚಿಂತನೆ ಅಂದಿನ ಕಾಲಕ್ಕೆ ಅಷ್ಟು ಸುಲಭದ ಮಾತಂತೂ ಖಂಡಿತ ಆಗಿರಲಿಲ್ಲ . ತಮ್ಮ ವಚನಗಳ ಮೂಲಕವೇ ಜಗತ್ತಿಗೆ ಮಹಾನ್ ಸಂದೇಶಗಳನ್ನು ಸಾರಿದ ಗುರು ನಮ್ಮ ಹೆಮ್ಮೆಯ ಬಸವಣ್ಣನವರು.
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ,
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ!
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ!
ಹೀಗೆ ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬೆಳಕು ತಂದವರು ಬಸವಣ್ಣನವರು. ಮೇಲು-ಕೀಳು ಎಂಬ ಭೇದ ಬಹಳಷ್ಟು ತೀವ್ರ ವಾಗಿದ್ದ ಕಾಲದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಿದರು. ಕ್ರಾಂತಿಯ ಬೀಜ ಬಿತ್ತಿದರು. ಸಮಾನತೆ ಸಹಬಾಳ್ವೆ ಕನಸು ಕಂಡಿದ್ದವರು ಬಸವಣ್ಣನವರು. ಇದೇ ಕಾರಣಕ್ಕೆ ಅನುಭವ ಮಂಟಪವನ್ನು ಕಟ್ಟಿದರು.ಈ ಮೂಲಕ ಎಲ್ಲಾ ವರ್ಗದವರೂ ಜೊತೆಯಾಗಿ ಸಾಗುವ,ಅಂಧ ಶ್ರದ್ಧೆಗಳನ್ನು ಕಿತ್ತೊಗೆಯುವ, ಮೇಲು – ಕೀಳೆಂಬ ಭಾವನೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡಿದ್ದರು ನಮ್ಮ ಬಸವಣ್ಣನವರು.

ಕಾಯಕವೇ ಕೈಲಾಸ ಎಂಬ ಧ್ಯೇಯವಾಕ್ಯವನ್ನು ಎಲ್ಲರ ಎದೆಯಲ್ಲಿ ಬಿತ್ತಿದ ಕರುನಾಡಿನ ಮಣ್ಣಿನಲ್ಲಿ ಜನಿಸಿದ ಹೆಮ್ಮೆಯ ವಿಶ್ವಗುರು ಬಸವಣ್ಣನವರ ಜಯಂತಿ ಇಂದು. ಹೀಗಾಗಿ ಎಲ್ಲರೂ ಬಸವಣ್ಣನವರಿಗೆ ನಮಿಸುತ್ತಿದ್ದಾರೆ.
ಅಕ್ಷಯ ತೃತೀಯ ದಿನದಂದು ಏನನ್ನೇ ಮಾಡಲಿ ಅದು ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ.ಆದ್ದರಿಂದ ಉಪಕಾರ ಮಾಡುವುದು,ಸಂಪತ್ತು ಗಳಿಸುವುದು, ಪೂಜೆ-ಪುನಸ್ಕಾರಗಳನ್ನು ಮಾಡುವುದಕ್ಕೆ ಅಕ್ಷಯ ತೃತೀಯ ದಿನದಂದು ವಿಶೇಷ ಮಹತ್ವವಿದೆ.ನಾಡಿನಾದ್ಯಂತ ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುವುದು ಮತ್ತೊಂದು ವಿಶೇಷದ ಸಂಗತಿ.
ಅಕ್ಷಯ ತೃತೀಯ ಮಹತ್ವ:
ಅಕ್ಷಯ ತೃತೀಯವು ಹಿಂದೂ ಸಂಸ್ಕೃತಿಯಲ್ಲಿ ಅಪಾರ ಮಹತ್ವವನ್ನು ಹೊಂದಿದೆ ಮತ್ತು ವಿವಿಧ ಶುಭ ಚಟುವಟಿಕೆಗಳಿಗೆ ಸೂಕ್ತ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ನೀವು ಯಾವುದೇ ಹೊಸ ಪ್ರಯತ್ನವನ್ನು ಕೈಗೊಂಡರೆ, ನಿಮಗೆ ಗಮನಾರ್ಹ ಯಶಸ್ಸು ಮತ್ತು ಸಮೃದ್ಧಿ ದೊರೆಯುತ್ತದೆ. ಇದರಲ್ಲಿ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದು, ಆಸ್ತಿಯಲ್ಲಿ ಹೂಡಿಕೆ ಮಾಡುವುದು ಅಥವಾ ಶೈಕ್ಷಣಿಕ ಅನ್ವೇಷಣೆಗಳನ್ನು ಕೈಗೊಳ್ಳುವುದು ಸೇರಿವೆ.ದಾನ ಕಾರ್ಯಗಳನ್ನು ಮಾಡುವುದು ಮತ್ತು ದೀನ ದಲಿತರಿಗೆ ದಾನ ಮಾಡುವುದರಿಂದ ಅಪಾರ ಆಶೀರ್ವಾದಗಳು ದೊರೆಯುತ್ತವೆ. ಮತ್ತು ದಾನ ಮಾಡುವವರ ಪುಣ್ಯವು ಹೆಚ್ಚಾಗುತ್ತದೆ. ಅಲ್ಲದೆ, ಅಕ್ಷಯ ತೃತೀಯವು ಮದುವೆ ಮತ್ತು ನಿಶ್ಚಿತಾರ್ಥಗಳಿಗೆ ಸೂಕ್ತ ದಿನವಾಗಿದೆ. ಈ ದಿನದಂದು ಒಟ್ಟಿಗೆ ಜೀವನವನ್ನು ಪ್ರಾರಂಭಿಸುವ ದಂಪತಿಗಳು ಸಮೃದ್ಧ ಮತ್ತು ಶಾಶ್ವತವಾದ ಒಕ್ಕೂಟವನ್ನು ಹೊಂದಿರುತ್ತಾರೆ ಎಂಬ ನಂಬಿಕೆಯಿದೆ.ಭಕ್ತರು ಈ ದಿನದಂದು ವಿಶ್ವದ ರಕ್ಷಕ ಭಗವಾನ್ ವಿಷ್ಣು ಮತ್ತು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಪ್ರಾರ್ಥನೆ ಸಲ್ಲಿಸುವುದು ಮತ್ತು ಪೂಜೆ ಸಲ್ಲಿಸುವುದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಭಾರತೀಯ ಸನಾತನ ಧರ್ಮ ಹೇಳಿದ್ದ ‘ಭಗವಂತ ನಿನ್ನಲ್ಲೇ ಇದ್ದಾನೆ ‘ಎಂಬುದನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ, ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದರು. ಅಂದಿನ ಭಕ್ತಿ ಭಂಡಾರಿ ಬಸವಣ್ಣನವರ ಆಚಾರ-ವಿಚಾರ ಎಂದೆಂದಿಗೂ ಪ್ರಸ್ತುತವಾದ ತತ್ವಗಳಾಗಿವೆ. 12ನೆಯ ಶತಮಾನದ ಭಾರತೀಯ ಸ್ತ್ರೀ ಪ್ರಮುಖವಾಗಿ ಕರ್ನಾಟಕದ ಸ್ತ್ರೀಯರ ಇತಿಹಾಸದಲ್ಲಿ ಮಹತ್ತರ ಬದಲಾವಣೆಯಾದ ಕಾಲಘಟ್ಟ ಎಂದರೆ ಅದಕ್ಕೆ ಬಸವಣ್ಣ ಯುಗದ ಕಲ್ಯಾಣ ಕ್ರಾಂತಿಯ ಪ್ರಭಾವ ಹೆಚ್ಚಾಗಿತ್ತು, ಸ್ತ್ರೀಯರಿಗೆ ಸಮಾನ ಸ್ಥಾನ ನೀಡಿ ಪುರುಷರೆತ್ತರಕ್ಕೆ ಸ್ತ್ರೀ ಉದ್ಧಾರಕನೆಂದು ಅನೇಕರು ಹೊಗಳಿದ್ದಾರೆ.
ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ,ಬಸವ, ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕನಾಗಮ್ಮ ಬಸವಣ್ಣ ನಿಲ್ಲದ ಮನೆಯಲ್ಲಿ ನಾನು ಇರಲಾರೆ, ಅನ್ನುವಲ್ಲಿ ಸಹೋದರಿ ಪ್ರೀತಿ ಮಿಂಚುತ್ತದೆ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರ ವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರವಿರಲಿಲ್ಲ, ಆದರೆ ಬಸವಣ್ಣನವರು ಲಿಂಗ ದೀಕ್ಷೆ, ವಿಭೂತಿ ಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಪುರುಷನಷ್ಟೇ ಅಧಿಕಾರವನ್ನು ಅವಳಿಗೂ ಕೊಟ್ಟರೂ, ಗುರುಬಸವೇಶ್ವರರಲ್ಲಿ ಸಾತ್ವಿಕ ಕಳೆ ಎರಡನ್ನು ಕಾಣಬಹುದು .
ಅಕ್ಷಯ ತೃತೀಯ ಇತಿಹಾಸ:
“ಅಕ್ಷಯ” ಎಂಬ ಪದದ ಅರ್ಥ ಸಂಸ್ಕೃತದಲ್ಲಿ “ಎಂದಿಗೂ ಕಡಿಮೆಯಾಗದ” ಎಂದಾಗಿದ್ದು, ದಿನದ ಶಾಶ್ವತ ಮತ್ತು ಅವಿನಾಶಿ ಸ್ವರೂಪವನ್ನು ಸೂಚಿಸುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಈ ವಿಶೇಷ ದಿನದಂದು ಕೈಗೊಳ್ಳುವ ಯಾವುದೇ ಶುಭ ಚಟುವಟಿಕೆಯು ಎಂದಿಗೂ ಕಡಿಮೆಯಾಗದ ಸಮೃದ್ಧಿ, ಯಶಸ್ಸು ಮತ್ತು ಅದೃಷ್ಟವನ್ನು ತರುತ್ತದೆ.ಇತರ ಪುರಾಣಗಳ ಪ್ರಕಾರ, ಅಕ್ಷಯ ತೃತೀಯವು ಉಗ್ರ ಯೋಧ-ಋಷಿ ಮತ್ತು ವಿಷ್ಣುವಿನ ಅವತಾರವಾದ ಭಗವಾನ್ ಪರಶುರಾಮನ ಜನ್ಮದಿನವಾಗಿದೆ. ನೀತಿವಂತಿಕೆ ಮತ್ತು ದುಷ್ಟ ಕ್ಷತ್ರಿಯ (ಯೋಧ ಜಾತಿ) ರಾಜರಿಂದ ಭೂಮಿಯನ್ನು ಶುದ್ಧೀಕರಿಸುವ ಅವರ ಅಚಲ ಭಕ್ತಿಯು ಅವರನ್ನು ಒಬ್ಬ ಧೀರ ಪಾತ್ರವನ್ನಾಗಿ ಮಾಡುತ್ತದೆ.ಒಂದು ಜನಪ್ರಿಯ ಕಥೆಯು ವಿಷ್ಣು ಮತ್ತು ಪವಿತ್ರ ನದಿ ಗಂಗೆಯ ಕಥೆಯನ್ನು ವಿವರಿಸುತ್ತದೆ. ಈ ದಿನದಂದು ಗಂಗೆ ಸ್ವರ್ಗದಿಂದ ಭೂಮಿಗೆ ಇಳಿದಳು ಎಂದು ನಂಬಲಾಗಿದೆ. ಇದು ಅಕ್ಷಯ ತೃತೀಯವನ್ನು ಹೊಸ ಆರಂಭಗಳು ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳಿಗೆ ಅತ್ಯಂತ ಮಂಗಳಕರ ಸಂದರ್ಭವನ್ನಾಗಿ ಮಾಡುತ್ತದೆ.
ಇಂದು ಸಮಾಜದ ಆರೋಗ್ಯಕರ ಬೆಳವಣಿಗೆಗೆ ದುಡಿದ ಕಾಯಕ ಯೋಗಿಯಾದ ಬಸವಣ್ಣನವರ ಜಯಂತಿ ಹಾಗೂ ಅಕ್ಷಯ ತೃತೀಯ ಅವರ ತತ್ವಗಳು ಸಾರ್ವಕಾಲಿಕವಾಗಿ ಅಕ್ಷಯವಾಗಲಿ ಎಂದು ಆಶಿಸೋಣ.
-ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.














