ಹೊಸನಗರ: ಬೇಸಿಗೆ ರಜೆಯ ಪ್ರಯುಕ್ತ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಿಸಿಲು ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ನೀರಿಗೆ ಇಳಿಯುವುದು ಈಜಾಡುವುದು ಸಹಜವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಜಾಗೃತಿವಹಿಸುವುದು ಅತ್ಯಗತ್ಯವಾಗಿದೆ ಎಂದು ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪಗೌಡರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಈಜಾಡುವ ಉದ್ದೇಶದಿಂದ ನೀರಿಗೆ ಇಳಿಯಲಿದ್ದು ಇದರಿಂದ ಅನಾಹುತವಾಗುವ ಸಂದರ್ಭ ಇರುತ್ತದೆ ಪ್ರತಿಯೊಬ್ಬರು ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಪೋಷಕ ವರ್ಗ ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಇದನ್ನೂ ಓದಿ > ಶಿವಪ್ಪನಾಯಕ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ವಿಭಾಗ ಪ್ರತಿಭಟನೆ
ಹೊಸನಗರ ತಾಲ್ಲೂಕಿನಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಿದ್ದು ಜನರು ಸಹ ಅದೇ ರೀತಿಯಿಂದ ಮನೆಯಲ್ಲಿ ಹಣ ಹಾಗೂ ಬೆಲೆ ಬಾಳುವ ಚಿನ್ನಭರಣಗಳನ್ನು ಇಟ್ಟು ಬೇರೆ-ಬೇರೆ ಊರುಗಳಿಗೆ ಹೋಗುವ ಸಂದರ್ಭದಲ್ಲಿ ನಮ್ಮ ಇಲಾಖೆಯವರ ಗಮನಕ್ಕೆ ತಂದು ಹೋಗಬೇಕು ಬೆಲೆ ಬಾಳುವ ವಸ್ತುಗಳನ್ನು ಕೈಯಲ್ಲಿ ಇಟ್ಟುಕೊಂಡು ಹೋಗಬೇಕು ಅಥವಾ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟು ಹೋಗುವುದರಿಂದ ನಿಮ್ಮ ವಸ್ತುಗಳು ಜೋಪಾನವಾಗಿರುತ್ತದೆ ತಾವು ಪರಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸುವುದರ ಜೊತೆಗೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದರಿಂದ ಪೊಲೀಸ್ ಇಲಾಖೆ ಜಾಗೃತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಕಳ್ಳತನದ ಪ್ರಕರಣಗಳೆ ಇಲ್ಲದಂತೆ ಮಾಡಲು ಸಾಧ್ಯ ಎಂದರು.
ಇದನ್ನೂ ಓದಿ > ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ















