ಶಿವಮೊಗ್ಗ: ಐದು ಶತಮಾನಕ್ಕೂ ಹಿಂದಿನ ಇತಿಹಾಸವುಳ್ಳ ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಎಂಬ ಪುಟ್ಟ ಗ್ರಾಮದ ಇತ್ತೀಚೆಗೆ ಅದ್ಭುತವಾಗಿ ಗುರುತಿಸಿಕೊಂಡು ಬೆಳೆದ ಗ್ರಾಮದ ಅಜ್ಜಪ್ಪಸ್ವಾಮಿ ದೇವಾಲಯ ಅತ್ಯಂತ ವಿಶೇಷ. ಅಜ್ಜಪ್ಪಸ್ವಾಮಿ ಐತಿಹಾಸಿಕ ಇತಿಹಾಸದೊಂದಿಗೆ ತನ್ನದೇ ನೆಲೆಗಟ್ಟನ್ನು ಹೊಂದಿರುವ ಭಗವಂತನಾಗಿದ್ದು, ಶಿವನ ಆರಾಧಕರಷ್ಟೇ ಅಲ್ಲ ಎಲ್ಲಾ ಆರಾಧಕರು ಅಜ್ಜಪ್ಪಸ್ವಾಮಿಗೆ ಸದಾ ಸ್ಪಂದಿಸುತ್ತಾರೆ ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಮುಂದಿಡುವ ಚಿಕ್ಕ ಚೊಕ್ಕ ಪ್ರಯತ್ನ ನಮ್ಮದು.
ಶಿವ, ಪರಮೇಶ್ವರ, ಈಶ್ವರ, ಮಂಜುನಾಥ, ಮೃತ್ಯುಂಜಯ, ಮುಕ್ಕಣ್ಣ ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶಿವನು ಶಿವಮೊಗ್ಗ ನಗರದ ಕೋಟೆಗಂಗೂರು ಗ್ರಾಮದಲ್ಲಿ ಭೂಮಿಯಿಂದ ಉದ್ಭವಿಸಿರುವ ಈಶ್ವರ ಲಿಂಗ (ಅಜ್ಜಪ್ಪಸ್ವಾಮಿ), ಬಸವಣ್ಣ, ಭಕ್ತರು ಬೇಡಿಕೊಳ್ಳುವ ಇಷ್ಟಾರ್ಥಗಳನ್ನು ನೇರವೇರಿಸುವ ಮೂಲಕ ಪುಣ್ಯಕ್ಷೇತ್ರವಾಗಿ ಬದಲಾವಣೆಯಾಗುತ್ತಿದೆ.
ಈ ದೇವಸ್ಥಾನಕ್ಕೆ 500 ವರ್ಷಗಳು ಇತಿಹಾಸವಿದ್ದು, ಈಶ್ವರ ಲಿಂಗ (‘ಅಜ್ಜಪ್ಪ ಸ್ವಾಮಿ’) ಹಾಗೂ ಬಸವಣ್ಣ ಮೂರ್ತಿ ಭೂಮಿಯಿಂದಲೇ ಉದ್ಭವಿಸಿ ಸುತ್ತ ಮುತ್ತ ಇರುವ ಸೋಮಿನಕೊಪ್ಪ, ಕಾಶಿಪುರ, ಬೊಮ್ಮನಕಟ್ಟೆ, ತ್ಯಾಜವಳ್ಳಿ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಸೇರಿದಂತೆ ಹತ್ತಾರು ಹಳ್ಳಿಗಳ ಭಕ್ತರ ಆರಾಧ್ಯ ದೈವವಾಗಿ ಮಾರ್ಪಾಡುತ್ತಿದೆ.
ಈ ದೇವಸ್ಥಾನದ ವಿಶೇಷವೇನೆಂದರೇ, ಇಲ್ಲಿಗೆ ಬರುವ ಭಕ್ತರ ಯಾವುದೇ ಸಂಕಷ್ಟಗಳಿದ್ದರೂ ಅಜ್ಜಪ್ಪಸ್ವಾಮಿಯ ಮುಂದೆ ಹೇಳಿಕೊಂಡರೇ ಪರಿಹಾರ ಸಿಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಏನನ್ನೇ ಬೇಡಿಕೊಂಡರು ಶಿಲೆ ಮೇಲೆ ಅಪ್ಪಣೆ ನೀಡುವ ಮೂಲಕ ಇಷ್ಟಾರ್ಥ ಪೂರೈಸುತ್ತದೆ. ಈ ಉದ್ಬವ ಮೂರ್ತಿಗಳ ಎದುರು ಬೇಡಿಕೊಂಡರೇ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದು. ಆರೋಗ್ಯ ಸಮಸ್ಯೆ, ಉದ್ಯೋಗ ಸೇರಿದಂತೆ ಭಕ್ತರ ಕಾರ್ಯಗಳಿಗೆ ದೇವರ ಅಪ್ಪಣೆಯೇ ಪ್ರಮುಖ ಎಂಬುದು ಗಮನಾರ್ಹ.
ದೇವಸ್ಥಾನವು ಶಿವಮೊಗ್ಗ ನಗರದಿಂದ 11 ಕಿ.ಮೀ ದೂರದಲ್ಲಿರುವ ಕೋಟೆಗಂಗೂರು ಗ್ರಾಮದಲ್ಲಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಟರ್ಮಿನಲ್ ಪಕ್ಕದಲ್ಲಿದೆ. ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುವುದಾದರೆ ಶಿವಮೊಗ ನಗರದಿಂದ ವಿನೋಭನಗರ, ಪೊಲೀಸ್ ಚೌಕಿ, ಸೋಮಿನಕೊಪ್ಪ, ಸೋಮಿನಕೊಪ್ಪ ಭೋವಿ ಕಾಲೋನಿ ಮಾರ್ಗವಾಗಿ ಹೋಗಬಹುದು ಹಾಗೂ ಸಾಗರ ರಸ್ತೆಯ ಪೆಸಿಟ್ ಕಾಲೇಜು, ತ್ಯಾವರೆಕೊಪ್ಪ ಮಾರ್ಗವಾಗಿಯೂ ಸಹ ಇಲ್ಲಿ ಭೇಟಿ ನೀಡಬಹುದು.
ಹೂವಿನ ಅಪ್ಪಣೆ ಇಲ್ಲಿನ ವಿಶೇಷ
ಇಲ್ಲಿಗೆ ಬರುವ ಭಕ್ತರ ಯಾವುದೇ ಸಂಕಷ್ಟಗಳಿದ್ದರೂ ಅಜ್ಜಪ್ಪ ಸ್ವಾಮಿಯ ಮುಂದೆ ಹೇಳಿಕೊಂಡರೇ ಪರಿಹಾರ ಸಿಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಶಿಲೆಯ ಮೇಲೆ ಹೂವುಗಳನ್ನು ಇಟ್ಟು ಏನನ್ನೇ ಬೇಡಿಕೊಂಡರು ಹೂವಿನ ಮೂಲಕ ಅಪ್ಪಣೆ ನೀಡಿ ಇಷ್ಟಾರ್ಥ ಪೂರೈಸುತ್ತದೆ. ಆರೋಗ್ಯ ಸಮಸ್ಯೆ, ಉದ್ಯೋಗ ಸೇರಿದಂತೆ ಭಕ್ತರ ಕಾರ್ಯಗಳಿಗೆ ದೇವರ ಅಪ್ಪಣೆಯೇ ಪ್ರಮುಖ ಎಂಬುದು ಗಮನಾರ್ಹ.
ಒಂದೇ ಕಡೆ ಉದ್ಭವಗೊಂಡಿರುವ ಮೂರ್ತಿಗಳು
ಈಶ್ವರ ಲಿಂಗ ಮತ್ತು ಬಸವಣ್ಣನ ಶಿಲೆ ಒಂದೇ ಕಡೆ ಅದರಲ್ಲೂ ಈಶ್ವರ ಲಿಂಗದ ಎದುರು ಬಸವಣ್ಣನ ಶಿಲೆ ಉದ್ಭವಗೊಂಡಿರುವುದು ಅಪರೂಪ. ಇಂತಹ ಅಪರೂಪರಕ್ಕೆ ಕೋಟೆಂಗಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನ ಸಾಕ್ಷಿಯಾಗಿದೆ.
ಮಳೆಗಾಗಿ ಅಜ್ಜಪ್ಪ ದೇವರ ಮೊರೆ ಹೋಗುವ ರೈತರು
ಮುಂಗಾರು, ಹಿಂಗಾರು ಮಳೆ ಕೈಕೊಟ್ಟಾಗ ಕೋಟೆಗಂಗೂರು ಮಾತ್ರವಲ್ಲದೇ ಸೋಮಿನಕೊಪ್ಪ, ಕಾಶಿಪುರ, ಬೊಮ್ಮನಕಟ್ಟೆ, ತ್ಯಾಜವಳ್ಳಿ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಸೇರಿದಂತೆ ಹತ್ತಾರು ಹಳ್ಳಿಗಳ ಜನರು ಅಜ್ಜಪ್ಪಸ್ವಾಮಿ ದೇವರ ಮೊರೆ ಹೋಗುತ್ತಾರೆ. ದೇವರಲ್ಲಿ ಪ್ರಾರ್ಥಿಸಿದ ಬಳಿಕ ತಮ್ಮ ಭಾಗದಲ್ಲಿ ಸಮೃದ್ಧ ಮಳೆ, ಬೆಳೆ ಆಗಲಿದೆ ಎಂಬುದು ರೈತರ, ಗ್ರಾಮಸ್ಥರ ನಂಬಿಕೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com

ಈಶ್ವರ ಲಿಂಗ ಮತ್ತು ಬಸವಣ್ಣನ ಶಿಲೆ ಒಂದೇ ಕಡೆ ಅದರಲ್ಲೂ ಈಶ್ವರ ಲಿಂಗದ ಎದುರು ಬಸವಣ್ಣನ ಶಿಲೆ ಉದ್ಭವಗೊಂಡಿರುವುದು ಅಪರೂಪ. ಇಂತಹ ಅಪರೂಪರಕ್ಕೆ ಕೋಟೆಂಗಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನ ಸಾಕ್ಷಿಯಾಗಿದೆ.












