ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ದೂರ ಬೆನ್ನಟ್ಟಿದ ಘಟನೆ ಆಗುಂಬೆಯಿಂದ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿಯವರೆಗೆ ನಡೆದಿದೆ.
ಪೊಲೀಸರ ತೀವ್ರ ನಿಗಾ ಹಾಗೂ ಬೆನ್ನಟ್ಟುವಿಕೆಗೆ ಬೆದರಿದ ಖದೀಮರು ತಮ್ಮ ಕಾರನ್ನು ರಸ್ತೆ ಬದಿ ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗ, 1 ಕಾರು, 3 ಬೈಕ್ ವಶಕ್ಕೆ, ಓರ್ವ ಆರೋಪಿ ಬಂಧನ
ರಿಪ್ಪನ್‌ಪೇಟೆಯ ಘಾಟಿ ರಸ್ತೆಯ ನಡುವೆ ಬೆಳಗಿನಜಾವ ಶುರುವಾದ ಆ ಚೇಸಿಂಗ್, ಸಿನಿಮಾ ದೃಶ್ಯವನ್ನೂ ಮೀರಿಸುವಂತಿತ್ತು. ಒಂದೆಡೆ ಸೈರನ್ ಮೊಳಗಿಸುತ್ತಾ ಮಿಂಚಿನಂತೆ ಧಾವಿಸುತ್ತಿದ್ದ ಪೊಲೀಸ್ ಜೀಪ್, ಇನ್ನೊಂದೆಡೆ ಎಸ್ಕೇಪ್ ಆಗಲು ಪ್ರಾಣಭಯದಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಖದೀಮರು. ಕೊನೆಗೆ ಪೊಲೀಸರ ಬಿಗಿಬಲೆಗೆ ಸಿಲುಕುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಕಾರನ್ನು ರಸ್ತೆಬದಿಯಲ್ಲೇ ಬಿಟ್ಟು ಆ ಮೂವರು ಖದೀಮರು ದಟ್ಟ ಅರಣ್ಯದ ಕತ್ತಲಲ್ಲಿ ಕಣ್ಮರೆಯಾಗಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗ, ಹೊಳೆಗೆ ಧುಮುಕಿದ ಮಹಿಳೆ, ತುಂಗಾ ನದಿಯಲ್ಲಿ ಶೋಧ!
ಆಗುಂಬೆ ಭಾಗದಲ್ಲಿ ಇತ್ತೀಚೆಗೆ ಸರಣಿಯಾಗಿ ನಡೆಯುತ್ತಿದ್ದ ದನ ಕಳ್ಳತನ ಪ್ರಕರಣದ ಬೆನ್ನತ್ತಿದ್ದ ಆಗುಂಬೆ ಪಿಎಸ್‌ಐ ಶಿವನಗೌಡ ಹಾಗೂ ತಂಡಕ್ಕೆ ಇಂದು ಬೆಳಗಿನಜಾವ ಪಕ್ಕಾ ಸುಳಿವು ಸಿಕ್ಕಿತ್ತು. ಆರೋಪಿಗಳು ಅದೇ ಕಾರಿನಲ್ಲಿ ಸಂಚರಿಸುತ್ತಿರುವ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರನ್ನು ಕಂಡ ಚಾಲಕ ಫುಲ್ ಆಕ್ಸಿಲೇಟರ್ ತುಳಿದು ಕಾರನ್ನು ರಿಪ್ಪನ್‌ಪೇಟೆ ಮಾರ್ಗವಾಗಿ ಎಸ್ಕೇಪ್ ಮಾಡಲು ಮುಂದಾಗಿದ್ದಾನೆ.
ಇದನ್ನೂ ಓದಿ > > ಶಿವಮೊಗ್ಗ, ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಏನಿದು ಪ್ರಕರಣ?














