ಶಿವಮೊಗ್ಗ: ನಗರದ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಮತ್ತು ಹೋಟೆಲ್ ಮಥುರ ಪ್ಯಾರಡೈಸ್ ರವರ ಸಹಯೋಗದಲ್ಲಿ ಸಂಸ್ಕೃತೋತ್ಸವ ಪ್ರಯುಕ್ತ ಶಿವಮೊಗ್ಗದ ಮಹಿಳೆಯರಿಗೆ ಜಡೆ ಹೆಣೆಯುವ ಸ್ಪರ್ಧೆಯನ್ನು ಆಗಸ್ಟ್ 22ರ ಶನಿವಾರ ಸಂಜೆ 5 ಗಂಟೆಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರ ಪ್ಯಾರಡೈಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!, ಏನಿದು ಪ್ರಕರಣ?
ಜಡೆ ಹೆಣೆಯುವವರು ಮತ್ತು ಜಡೆ ಹೆಣಿಸಿಕೊಳ್ಳುವವರು ಇಬ್ಬರಿಗೂ ಜಡೆ ಇರಬೇಕು. ಕಾಲಾವಧಿ 45 ನಿಮಿಷಗಳು. ಸ್ಪರ್ಧೆಯಲ್ಲಿ ಭಾಗವಹಿಸುವವರು ಆಗಸ್ಟ್ 20 ರ ಒಳಗಾಗಿ ತಮ್ಮ ಹೆಸರನ್ನು 9448790127 ಮೊಬೈಲ್ ನಂಬರಿಗೆ ಕಳಿಸಿಕೊಡಬೇಕು.
ಇದನ್ನೂ ಓದಿ > > ರಾಜ್ಯದಲ್ಲಿ ಗುಟ್ಕಾ, ತಂಬಾಕು ಮಿಶ್ರಿತ ಪಾನ್ ಮಸಾಲಾ ನಿಷೇಧ!, ಯಾವೆಲ್ಲ ಉತ್ಪನ್ನಗಳಿಗೆ ನಿಷೇಧ?
ಹೆಚ್ಚಿನ ಮಾಹಿತಿಗಾಗಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಇವರ ದೂರವಾಣಿ ಸಂಖ್ಯೆ 9448790127 ಇವರನ್ನು ಸಂಪರ್ಕಿಸಬೇಕೆಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ಕೋರಿದ್ದಾರೆ.
ಇದನ್ನೂ ಓದಿ > > ಆಗುಂಬೆ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಡಿ.ಶಿವಣ್ಣ ನಿಧನ














