ಶಿವಮೊಗ್ಗ: ಭಾರತದ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಕಲ್ಪ ಶಿವಮೊಗ್ಗ( ಸಂಘ ಮತ್ತು ಸಂಸ್ಥೆಗಳ ಒಕ್ಕೂಟ) ವತಿಯಿಂದ ಆ.14 ರಾತ್ರಿ 9 ರಿಂದ 12 ಗಂಟೆಯವರೆಗೆ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ “ಸ್ವದೇಶಿ ಮಂತ್ರ -2026” ಎಂಬ ಶೀರ್ಷಿಕೆಯಡಿ ಸ್ವಾತಂತ್ರ್ಯ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಕಲ್ಪದ ಪರವಾಗಿ ಸಂಚಾಲಕ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾರತದ ರಕ್ಷಣೆಗಾಗಿ ಕಾರ್ಯ ನಿರ್ವಹಿಸಿದ ಭಾರತೀಯ ಸೈನಿಕರನ್ನು ಗೌರವಿಸಲಾಗುವುದು. ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಸಂಕಲ್ಪ ಶಿವಮೊಗ್ಗ ಈ ಬಾರಿ ನಗರದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಸಲು ಸಜ್ಜಾಗಿದೆ.
ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಗುತ್ತದೆ. ವಿಶೇಷ ದೇಶಭಕ್ತಿ ಗೀತೆಗಳು, ದೇಶದ ಭಕ್ತಿಗಳ ವಿಶೇ? ನೃತ್ಯ, ಯೋಧರಿಗೆ ಸನ್ಮಾನ, ಸ್ವಾತಂತ್ರ್ಯ ಸಂಭ್ರಮಾಚರಣೆ, ಸಿಹಿ ವಿತರಣೆಯ ಮೂಲಕ ಸಾಗಿ ರಾ? ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ ಎಂದರು.
ಇದನ್ನೂ ಓದಿ > >ಮಹಿಳೆಯರಿಗೆ ಜಡೆ ಹೆಣೆಯುವ ಸ್ಪರ್ಧೆ, ಯಾವಾಗ, ಎಲ್ಲಿ?
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಗಿಲ್ ಯುದ್ಧದ ಪ್ರದೇಶದಲ್ಲಿ ಅತೀ ಹೆಚ್ಚು ಬಾರಿ ಸೇವೆ ಸಲ್ಲಿಸಿದ ನಮ್ಮ ಶಿವಮೊಗ್ಗದ ಯೋಧ ಸುಭಾಷ್ ಚಂದ್ರ ತೇಜಸ್ವಿಯವರು ನೆರವೇರಿಸಲಿದ್ದಾರೆ. 250ಕ್ಕೂ ಹೆಚ್ಚು ಜನ ಕಲಾವಿದರು ರಾಷ್ಟ್ರೀಯ ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಸಾವಿರಕ್ಕೂ ಹೆಚ್ಚು ಕಲಾವಿದರು ನೃತ್ಯದಲ್ಲಿ ಭಾಗವಹಿಸಲಿದ್ದಾರೆ.
ನಾಡಗೀತೆಯೊಂದಿಗೆ ಪ್ರಾರಂಭವಾಗಿ ರಾತ್ರಿ 12 ಗಂಟೆಗೆ ಸಿಡಿಮದ್ದು ಸಿಡಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುವುದು. ನಾಗರಿಕರಿಗೆ ಸಿಹಿಯನ್ನು ಹಂಚುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುವುದು.
ನಾಡಗೀತೆಯೊಂದಿಗೆ ಪ್ರಾರಂಭವಾಗಿ ರಾತ್ರಿ 12 ಗಂಟೆಗೆ ಸಿಡಿಮದ್ದು ಸಿಡಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುವುದು. ನಾಗರಿಕರಿಗೆ ಸಿಹಿಯನ್ನು ಹಂಚುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುವುದು.
ಆಯೋಜಕರುಗಳಾದ ಗಾಯಕಿ ಸುರೇಖಾ ಹೆಗ್ಗಡೆ, ವಕೀಲ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ವಕೀಲ ಕೆ.ಪಿ.ಶ್ರೀಪಾಲ್, ಸತೀಶ್ ಕುಮಾರ್ ಶೆಟ್ಟಿ, ವಸಂತ್ ಹೋಬಳಿದಾರ್, ಎನ್.ಮಂಜುನಾಥ್, ಬಿ.ಗೋಪಿನಾಥ್, ಸ್ಟೇಡಿಯಂ ಮಂಜಣ್ಣ ಮುಂತಾದವರು ಮಾತನಾಡಿ, ಸಂಕಲ್ಪ ಶಿವಮೊಗ್ಗ ಮೂಲಕ ಶಿಕ್ಷಣ, ಸೇವೆ, ಸಂಸ್ಕೃತಿ ಮತ್ತು ಸಮೃದ್ಧಿಯ ಸಂಕಲ್ಪದೊಂದಿಗೆ ನಗರದ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್‍ಯಕ್ರಮಗಳನ್ನು ನಡೆಸಲು ಈ ತಂಡ ಸಜ್ಜಾಗಿದೆ ಎಂದು ತಿಳಿಸಿದರು.
ಕಾರ್‍ಯಕ್ರಮಕ್ಕೆ ಬಿಳಿ ಉಡುಪಿನೊಂದಿಗೆ ಆಗಮಿಸಲು ವಿನಂತಿಸಿದ ಅವರು ಮಳೆ ಬಂದರೂ ಕೂಡ ಕಾರ್‍ಯಕ್ರಮ ನಡೆಯುತ್ತದೆ. ಛತ್ರಿ, ಕ್ಯಾಪ್, ರೈನ್‌ಕೋಟ್ ನೊಂದಿಗೆ ಬರಬೇಕು. ಸುಮಾರು ಹತ್ತು ಸಾವಿರ ಪ್ರೇಕ್ಷಕರೂ ಬರುವ ಸಾಧ್ಯತೆ ಇರುವುದರಿಂದ ಎಲ್ಲಾ ರೀತಿಯ ಭದ್ರತೆಯನ್ನೂ ಕೂಡ ಏರ್ಪಡಿಸಲಾಗಿದೆ ಎಂದರು.
ಈ ಕಾರ್‍ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಧರ್ಮಗುರುಗಳು, ಉದ್ಯಮಿಗಳು, ಕಾರ್ಯಕರ್ತರು, ಸರ್ಕಾರಿ ನೌಕರರು ಹಾಗೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತೆ ಸಂಕಲ್ಪ ಶಿವಮೊಗ್ಗ ತಂಡ ಕೋರಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಳ್ಳೆಕೇರೆ ಸಂತೋಷ್ , ಹರ್ಷ ಭೋವಿ ಇದ್ದರು.














