ಹೊಳೆಹೊನ್ನೂರು : ಪಟ್ಟಣದ ರೈಸ್ ಮಿಲ್ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವುಕಂಡಿದ್ದಾರೆ.
ಮೃತ ವ್ಯಕ್ತಿಯನ್ನು ಅರಸೀಕೆರೆ ಮೂಲದ ಸುರೇಶಗೌಡ ಎಂದು ಗುರುತಿಸಲಾಗಿದೆ. ಸುರೇಶ್ ಗೌಡ ಅವರು ಅವರ ಸಂಬಂಧಿಯ ಜೊತೆಗೆ ಹೊಳೆಹೊನ್ನೂರಿನಲ್ಲಿ ಬೇಕರಿ ನೋಡಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > > ಸಂಸದ ಬಿ.ವೈ.ರಾಘವೇಂದ್ರ ಜನ್ಮದಿನಾಚರಣೆ, ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ
ಹೊಳೆಹೊನ್ನೂರು ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು, ಅರಸಿಕೆರೆ ಮೂಲದ ಸುರೇಶಗೌಡ ಅವರು ನಡೆದುಕೊಂಡು ಹೋಗುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಅವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ನಂತರ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸುರೇಶಗೌಡ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > > ರಿಪ್ಪನ್‌ಪೇಟೆ, ಅರಸಾಳು ಬಳಿ ಹಳ್ಳಕ್ಕೆ ಉರುಳಿದ ಕೋಕ್ ತುಂಬಿದ ಲಾರಿ!
ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > > ಆಟೋ ಚಾಲಕರ ಪ್ರತಿಭಟನೆ, ಇಷ್ಟು ಡಾಕ್ಯುಮೆಂಟ್ಸ್ ಇಲ್ಲ ಅಂದ್ರೆ ಆಟೋ ಸೀಜ್!, ದೇವರಾಜ್ ಖಡಕ್ ವಾರ್ನಿಂಗ್














