ಸಾಗರ: ಪಟ್ಟಣದ ಗಣಪತಿ ಕೆರೆಯ ಅಗ್ರಹಾರಕ್ಕೆ ತೆರಳುವ ಮಾರ್ಗದ ತಿರುವಿನಲ್ಲಿ ಸ್ಕಾರ್ಪಿಯೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಇದನ್ನೂ ಓದಿ > >ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ!
ಕಾರು ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿ.ಸಿ.) ಹಾಗೂ ಕೆರೆಯ ತಡೆಗೋಡೆಯ ಚಾನಲ್ ನಡುವಿನ ಜಾಗದಲ್ಲಿ ಪಲ್ಟಿಯಾಗಿದ್ದು, ಕಾರಿನಲ್ಲಿ ಯಾರೂ ಪ್ರಯಾಣಿಸುತ್ತಿರುವುದು ಕಂಡುಬಂದಿಲ್ಲ. ಕಾರು ಹೇಗೆ ಅಪಘಾತಕ್ಕೀಡಾಯಿತು ಹಾಗೂ ಘಟನೆಯ ವೇಳೆ ಕಾರಿನಲ್ಲಿದ್ದವರು ಯಾರು ಎಂಬ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ > >ಶಿವಮೊಗ್ಗ, ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ, 17,000 ದಂಡ, ಏನಿದು ಕೇಸ್?
ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಘಟನೆಯ ಫೋಟೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ > ಹೊಳೆಹೊನ್ನೂರು | ವಾಹನ ಡಿಕ್ಕಿ, ಅರಸೀಕೆರೆ ಮೂಲದ ವ್ಯಕ್ತಿ ಸಾವು!














