ಸಾಗರ : ತಾಲೂಕಿನ ಹೆಗ್ಗೋಡಿನ ಅತ್ತಿಸರ ಗ್ರಾಮದಲ್ಲಿ ಕಡ್ಜದ ಹುಳಗಳ ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದಾನೆ.
ಮೃತ ಬಾಲಕನನ್ನು ಅತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಅವರ ಪುತ್ರ ನಿಷ್ಮಿತ್ ಎಂದು ಗುರುತಿಸಲಾಗಿದೆ.
ಮನೆಯ ಹಿತ್ತಲಿನ ತೋಟದಲ್ಲಿ ತಂದೆ ವೆಂಕಟೇಶ್ ಅವರೊಂದಿಗೆ ಇದ್ದ ವೇಳೆ ನಿಶ್ಮೀತ್ ಹಾಗೂ ಅವರ ತಂದೆಯ ಮೇಲೆ ಕಡ್ಜದ ಹುಳುಗಳು ದಾಳಿ ಮಾಡಿವೆ ಎನ್ನಲಾಗಿದೆ.
ಇದನ್ನೂ ಓದಿ > >ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ!
ತಕ್ಷಣ ನಿಶ್ಮೀತ್ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತಂದೆ ವೆಂಕಟೇಶ್ ಅವರಿಗೂ ಹುಳುಗಳು ಕಚ್ಚಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ > > ಗಣಪತಿ ಕೆರೆಯ ದಂಡೆ ಮೇಲೆ ಕಾರು ಪಲ್ಟಿ, ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ!
ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಆವರಿಸಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ಬಿ.ಹೆಚ್.ರಸ್ತೆಯಲ್ಲಿ ಅಪಘಾತ, ಬಸ್ಸಿನ ಅಡಿ ಸಿಲುಕಿದ ವೃದ್ಧ!














