ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಲಾಡ್ಜ್ಗಳಿಗೆ ಪೊಲೀಸರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ > >ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ!
ಈ ವೇಳೆ ಗ್ರಾಹಕರ ನೋಂದಣಿ ಪುಸ್ತಕ ಹಾಗೂ ಲೆಡ್ಜರ್ಗಳನ್ನು ಪರಿಶೀಲಿಸಲಾಯಿತು. ಲಾಡ್ಜ್ಗಳಲ್ಲಿ ತಂಗಿರುವ ವ್ಯಕ್ತಿಗಳು ಹಾಗೂ ಸಂಶಯಾಸ್ಪದವಾಗಿ ಕಂಡುಬಂದವರ ಹಿನ್ನೆಲೆ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಮುನ್ನೆಚ್ಚರಿಕೆಗಳ ಬಗ್ಗೆಯೂ ಪರಿಶೀಲನೆ ನಡೆಸಿದ ಪೊಲೀಸರು ಸೂಕ್ತ ಸೂಚನೆಗಳನ್ನು ನೀಡಿದರು
ಇದನ್ನೂ ಓದಿ > >ಮನೆಯ ಹಿತ್ತಲಿನ ತೋಟಕ್ಕೆ ತೆರಳಿದ್ದ ಬಾಲಕ ಸಾವು! ಆಗಿದ್ದೇನು?















