ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ನೌಕರರ ಸಂಘದ ಅಧ್ಯಕ್ಷ ಎನ್ ಗೋವಿಂದಣ್ಣ ಅವರಿಗೆ ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡರು ಅಭಿನಂದನೆ ಸಲ್ಲಿಸಿದ್ದಾರೆ.
ಪಾಲಿಕೆಯ ನೌಕರರ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿರುವ ಎನ್. ಗೋವಿಂದಣ್ಣ ಅವರಿಗೆ ಬಡ್ತಿ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಅವರ ಮುಂದಿನ ವೃತ್ತಿಜೀವನ ಸುಗಮವಾಗಿರಲಿ ಹಾಗೂ ಹೊಸ ಹುದ್ದೆಯಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಆಯುಕ್ತ ಮಾಯಣ್ಣಗೌಡರು ಶುಭ ಹಾರೈಸಿದರು.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ಗೋಸೇವಾ ಸಂಭ್ರಮ, ಸಾವಯವ ಗೊಬ್ಬರ, ಗೋ ಉತ್ಪನ್ನಗಳ ಪ್ರದರ್ಶನ
ಹೊಸ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಲಿರುವ ಗೋವಿಂದಣ್ಣ ಅವರು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವುದರ ಜೊತೆಗೆ, ಇಲಾಖೆಯ ಕರ್ತವ್ಯಗಳನ್ನು ದಕ್ಷತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.
ಇದನ್ನೂ ಓದಿ > > ಶಿವಮೊಗ್ಗ, ಹೆಜ್ಜೇನು ದಾಳಿ, ಚಿಕಿತ್ಸೆ ಫಲಿಸದೆ ರೈತ ಸಾವು, ಆಗಿದ್ದೇನು?
ಗೋವಿಂದಣ್ಣ ಅವರಿಗೆ ಬಡ್ತಿ ದೊರೆತಿರುವುದು ಪಾಲಿಕೆಯ ವಲಯದಲ್ಲಿ ಸಂತಸ ಮೂಡಿಸಿದ್ದು, ಅವರ ಮುಂದಿನ ಸೇವಾ ಬದುಕಿಗೆ ಶುಭಾಶಯಗಳು ವ್ಯಕ್ತವಾಗಿವೆ.














