ತೀರ್ಥಹಳ್ಳಿ: ತೀರ್ಥಹಳ್ಳಿ- ಕೋಣಂದೂರುಗುಡ್ಡೆಕೊಪ್ಪ ಸಮೀಪ ಹಿರೇಸರದಲ್ಲಿ ಕಾಳಿಂಗ ಸರ್ಪ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಿ ಅಡಿಕೆ ತುಂಬಿದ ಲಾರಿ ಪಲ್ಟಿಯಾಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ > ಶಿವಮೊಗ್ಗದ ವಾಹನ ಸವಾರರಿಗೆ ಪೊಲೀಸ್ ಇಲಾಖೆಯ ಮಹತ್ವದ ಪ್ರಕಟಣೆ ಏನು?
ಸಾಗರದಿಂದ ಕಾರ್ಕಳಕ್ಕೆ ಈ ವಾಹನ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಾಳಿಂಗ ಸರ್ಪ ದಿಢೀರ್ ಅಡ್ಡಬಂದಿದೆ. ಇದರಿಂದ ಚಾಲಕ ಆತಂಕಗೊಂಡು ಒಮ್ಮೆಲೇ ಬ್ರೇಕ್ ಹಾಕಿದ್ದು ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿ ಹೊಡೆದಿದೆ. ಲಾರಿ ಚಾಲಕನಿಗೆ ಯಾವುದೇ ರೀತಿಯ ಅಪಾಯವಾಗದೆ ಪಾರಾಗಿದ್ದಾನೆ. ಕಾರ್ಯನಿಮಿತ್ತ ಈ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು, ತಮ್ಮ ಕಾರನ್ನು ನಿಲ್ಲಿಸಿ ಲಾರಿ ಚಾಲಕನನ್ನು ಮಾತನಾಡಿಸಿದರು.














