• About Us
  • Advertise
  • Privacy & Policy
  • Contact Us
Wednesday, October 28, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home ಶಿವಮೊಗ್ಗ

ಶಿವಮೊಗ್ಗದಲ್ಲಿ ದಸರಾ ವೈಭವ, ಅದ್ದೂರಿ ದಸರಾ ಮಹೋತ್ಸವಕ್ಕೆ ಚಾಲನೆ, ಸಂಭ್ರಮದ ಕ್ಷಣಗಳು ಹೇಗಿದ್ದವು?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
October 11, 2026
in ಶಿವಮೊಗ್ಗ
ಶಿವಮೊಗ್ಗದಲ್ಲಿ ದಸರಾ ವೈಭವ, ಅದ್ದೂರಿ ದಸರಾ ಮಹೋತ್ಸವಕ್ಕೆ ಚಾಲನೆ, ಸಂಭ್ರಮದ ಕ್ಷಣಗಳು ಹೇಗಿದ್ದವು?
Share on FacebookShare on TwitterShare on WhatsApp

ಶಿವಮೊಗ್ಗ:  ಶಿವಮೊಗ್ಗ ನಗರದಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ಮಹಾನಗರ ಪಾಲಿಕೆಯ ಆವರಣದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಪೂಜಾ ವಿಧಿವಿಧಾನಗಳ ಬಳಿಕ ಹೂವು ಹಾಗೂ ವಿವಿಧ ಅಲಂಕಾರಗಳಿಂದ ಸಿಂಗರಿಸಿದ ವಾಹನದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ಕೋಟೆ  ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದತ್ತ ಮೆರವಣಿಗೆ ಆರಂಭಿಸಲಾಯಿತು.

ಇದನ್ನೂ ಓದಿ > > ಸಾಗರ, ಗೋಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು, ಓರ್ವ ಆರೋಪಿ ವಶಕ್ಕೆ, ಕಠಿಣ ಕ್ರಮದ ಎಚ್ಚರಿಕೆ!

ಡೊಳ್ಳು, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯ ಮೆರುಗು

ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಗೆ ಸಾಂಪ್ರದಾಯಿಕ ಕಲಾತಂಡಗಳು ವಿಶೇಷ ಮೆರುಗು ನೀಡಿದವು. ಡೊಳ್ಳು ಹಾಗೂ ವಿವಿಧ ವಾದ್ಯಗೋಷ್ಠಿಗಳ ನಾದದ ನಡುವೆ ತಲೆಯ ಮೇಲೆ ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಭಕ್ತರು ದೇವಿಯ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ದೇವಿಯ ಅಲಂಕೃತ ವಾಹನ ಸಾರ್ವಜನಿಕರ ಗಮನ ಸೆಳೆಯಿತು.

ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನಾ ಕಾರ್ಯಕ್ರಮ

ಮಹಾನಗರ ಪಾಲಿಕೆಯ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಶಿವಪ್ಪನಾಯಕ ಪ್ರತಿಮೆ ಹಾಗೂ ಬಿ.ಎಚ್. ರಸ್ತೆ ಮಾರ್ಗವಾಗಿ ಕೋಟೆ ಪ್ರದೇಶದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತಲುಪಿ. ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವನ್ನು ಚಿತ್ರನಟ ಶ್ರೀನಾಥ್ ಉದ್ಘಾಟಿಸಿದರು.

ಪೂಜೆ, ಸಾಂಪ್ರದಾಯಿಕ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಿವಮೊಗ್ಗದ ದಸರಾ ಮಹೋತ್ಸವಕ್ಕೆ ಸಂಭ್ರಮದ ಆರಂಭ ದೊರೆತಿದ್ದು, ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ದಸರಾ ಆಚರಣೆಯು ನಗರದಲ್ಲಿ ಹಬ್ಬದ ವಾತಾವರಣವನ್ನು ಹೆಚ್ಚಿಸಿದೆ.

ಮಲೆನಾಡಿಗರ ಪ್ರೀತಿಗೆ ಕುಣಿದು ಕುಪ್ಪಳಿಸಿದ ನಟ ಶ್ರೀನಾಥ್!

  ಮಲೆನಾಡಿನ ಜನರ ಪ್ರೀತಿ ಹಾಗೂ ಅಭಿಮಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ  ಶ್ರೀನಾಥ್ ಅವರು ಕುಣಿದು ಕುಪ್ಪಳಿಸಿದರು. ಶಿವಮೊಗ್ಗದ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಅಭಿಮಾನಿಗಳ ಆತ್ಮೀಯ ಸ್ವಾಗತ ಹಾಗೂ ಪ್ರೀತಿಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದರು.

ಮಲೆನಾಡಿಗರ ಪ್ರೀತಿ, ಅಭಿಮಾನ ಹಾಗೂ ಉತ್ಸಾಹದ ವಾತಾವರಣದಲ್ಲಿ ಶ್ರೀನಾಥ್ ಅವರು ಸಂತಸದಿಂದ ಕುಣಿದು ಕುಪ್ಪಳಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳೂ ಸಂಭ್ರಮದಲ್ಲಿ ಭಾಗಿಯಾದರು.

ಪ್ರಣಯರಾಜ ಶ್ರೀನಾಥ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು!

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪ್ರಣಯರಾಜ ಶ್ರೀನಾಥ್ ಅವರೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ದೇವಸ್ಥಾನದ ಪಕ್ಕದಲ್ಲಿರುವ ಹೋಮ ನಡೆಯುವ ಪ್ರಾಂಗಣದಲ್ಲಿ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ನೆಚ್ಚಿನ ನಟನೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆಸಿಕೊಂಡ ಅಭಿಮಾನಿಗಳ ಸಂತಸಪಟ್ಟರು.

Tags: Dasara festivities in Shivamogga—how was the launch of the grand Dasara festival? Actor Srinath danced with great enthusiasm!Dasara festivities in Shivamogga\kannada newskannada news livelatest newsmalnad newsshimogashivamoggaಶಿವಮೊಗ್ಗ
Previous Post

ರೈತರ ಸಂಕಷ್ಟ ಆಲಿಸಲು ಅ.12ರಂದು ಶಿವಮೊಗ್ಗಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ, ಗೀತಾ ಸತೀಶ್

Next Post

ಶಿವಮೊಗ್ಗ, ರೈಲ್ವೆ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್!,

ರಾಕೇಶ್ ಸೋಮಿನಕೊಪ್ಪ

ರಾಕೇಶ್ ಸೋಮಿನಕೊಪ್ಪ

Next Post
ಶಿವಮೊಗ್ಗ, ರೈಲ್ವೆ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್!,

ಶಿವಮೊಗ್ಗ, ರೈಲ್ವೆ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್!,

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ,  ಮೆರವಣಿಗೆ ಈಗ ಸ್ಥಗಿತ!

ಶಿವಮೊಗ್ಗ ದಸರಾ, ಆನೆಗಳ ಗುದ್ದಾಟ!, ಕೆಳಗೆ ಬಿದ್ದ ಅಂಬಾರಿ, ಮೆರವಣಿಗೆ ಈಗ ಸ್ಥಗಿತ!

October 21, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

October 27, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಆಘಾತ, ಬಾಲಕ ಸಾವು!

October 27, 2026
ಸೊರಬ, ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ಪ್ರದಾನ

ಸೊರಬ, ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ಪ್ರದಾನ

October 27, 2026
ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?

October 26, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ, ಕೆ.ಎಸ್.ಈಶ್ವರಪ್ಪ ಸೇರಿ ಹಲವರು ಪೊಲೀಸ್​ ವಶಕ್ಕೆ, ನವೆಂಬರ್ 15ಕ್ಕೆ ಡೆಡ್‌ಲೈನ್!

October 27, 2026
ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಆಘಾತ, ಬಾಲಕ ಸಾವು!

October 27, 2026

Copyright © 2026 Yuva Dhwani. Designed by KIPL